Publish Date: Sat, 11 Jan 2020 (18:18 IST)
Updated Date: Sat, 11 Jan 2020 (18:21 IST)
ಬಳ್ಳಾರಿ ನಗರ ಶಾಸಕರ ಮನೆ ಮುಂದೆ ಧರಣಿ ನಡೆಸೋಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತೊಡೆತಟ್ಟಿ ಸಿದ್ಧರಾಗಿದ್ದಾರೆ.
ಜನೇವರಿ 13 ರಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನಿವಾಸದ ಎದುರು ಧರಣಿ ಮಾಡಲು ಸೂಕ್ತ ಭದ್ರತೆ ನೀಡಬೇಕು.
ಹೀಗಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ಈ ನಡುವೆ ಜಮೀರ್ ಧರಣಿಗೆ ಅನುಮತಿ ನೀಡೋದು ಬೇಡಾ ಅಂತ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಶಾಸಕರ ಮನೆ ಮುಂದೆ ಧರಣಿ ನಡೆಸೋದಕ್ಕೆ ಯಾವುದೇ ಕಾರಣಕ್ಕೂ ಜಮೀರ್ ಅಹ್ಮದ್ ಖಾನ್ ಅವರಿಗೆ ಅನುಮತಿ ಕೊಡಲೇಬಾರದು ಅಂತ ಕೊಂಡಯ್ಯ ಹೇಳಿದ್ದಾರೆ.