Select Your Language

Notifications

webdunia
webdunia
webdunia
webdunia

ವಕ್ಫ್ ವಿವಾದ: ಸದ್ಯಕ್ಕೆ ಎಲ್ಲಾ ಸ್ಟಾಪ್ ಮಾಡ್ತೀವಿ, ಚುನಾವಣೆ ಮುಗಿದ ಬಳಿಕ ನೋಡ್ತಿವಿ ಎಂದ ಜಮೀರ್ ಅಹ್ಮದ್

Zameer Ahmed Khan

Krishnaveni K

ಬೆಂಗಳೂರು , ಶನಿವಾರ, 2 ನವೆಂಬರ್ 2024 (16:31 IST)
ಬೆಂಗಳೂರು: ವಕ್ಫ್ ನೋಟಿಸ್ ವಿಚಾರವಾಗಿ ಭಾರೀ ವಿವಾದವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಲಾಗಿದ್ದ ನೋಟಿಸ್ ವಾಪಸ್ ಪಡೆಯಲು ಆದೇಶ ಮಾಡಿದ್ದಾರೆ. ಈ ಬಗ್ಗೆ ವಕ್ಫ್ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ವಕ್ಫ್ ವಿಚಾರ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದೇ ವಿಚಾರ ಈಗ ಉಪಚುನಾವಣೆಯಲ್ಲೂ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರವಾಗಿದೆ. ವಿವಿಧ ಜಿಲ್ಲೆಗಳ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಆತಂಕ ಸೃಷ್ಟಿಯಾಗಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ.

ಇಂದು ಕಂದಾಯ ಇಲಾಖೆ, ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ರೈತರ ಪಹಣಿಯಲ್ಲಿ ವಕ್ಫ್ ನಮೂದಾಗಿರುವುದನ್ನು ಹಿಂಪಡೆಯಲು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಕ್ಫ್ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದು, ನಾವು ಈ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಲ್ಲ. ಅದರಂತೆ ಈವತ್ತು ಸಿಎಂ ಸಾಹೇಬ್ರು ಆದೇಶ ಕೊಟ್ಟಿದ್ದಾರೆ ಎಂದಿದ್ದಾರೆ.

ಸಾಮಾನ್ಯ ಜನರ ಆಸ್ತಿಯನ್ನು ಹಾಗೆಲ್ಲಾ ಕಬಳಿಸಲು ಸಾಧ್ಯವಿಲ್ಲ. ಏನೋ ತಪ್ಪಾಗಿರಬಹುದು. ಕಾಂಗ್ರೆಸ್ ಅವಧಿ ಮಾತ್ರವಲ್ಲ, ಬಿಜೆಪಿ ಅವಧಿಯಲ್ಲಿ ನೋಟಿಫಿಕೇಷನ್ ಆದ ರೈತರ ಜಮೀನುಗಳ ವಿಚಾರವಾಗಿಯೂ ಎಲ್ಲಾ ನೋಟಿಫಿಕೇಷನ್ ಗಳನ್ನು ಸದ್ಯಕ್ಕೆ ಸ್ಟಾಪ್ ಮಾಡ್ತೀವಿ. ಮುಂದೆ ಚುನಾವಣೆ ಮುಗಿಯಲಿ. ಆ ಬಳಿಕ ಎಲ್ಲವನ್ನೂ ರಿವ್ಯೂ ಮಾಡಿ ಮುಂದುವರಿಯಲಿದ್ದೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೇ ಬಿಟ್ರೆ ಧರ್ಮಸ್ಥಳ, ಶೃಂಗೇರಿ ದೇವಾಲಯನೂ ವಕ್ಫ್ ನದ್ದು ಅಂತಾರೆ: ತೇಜಸ್ವಿ ಸೂರ್ಯ ವಾಗ್ದಾಳಿ