Select Your Language

Notifications

webdunia
webdunia
webdunia
webdunia

ಕರ್ನಾಟಕದ ಗ್ಯಾರಂಟಿ ಗೊಂದಲವನ್ನು ಮಲ್ಲಿಕಾರ್ಜುನ ಖರ್ಗೆಯೇ ಬಯಲು ಮಾಡಿದರು: ಪ್ರಧಾನಿ ಮೋದಿ

Narendra Modi

Krishnaveni K

ನವದೆಹಲಿ , ಶುಕ್ರವಾರ, 1 ನವೆಂಬರ್ 2024 (20:20 IST)
Photo Credit: X
ನವದೆಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಗೊಂದಲದ ಬಗ್ಗೆ ಸ್ವತಃ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯೇ ಬಣ್ಣ ಬಯಲು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ಖರ್ಗೆ ನೀಡಿದ ಎಚ್ಚರಿಕೆಯಿಂದ ಕಾಂಗ್ರೆಸ್ ನ ಬಣ್ಣ ಬಯಲಾಗಿದೆ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕಡೆಗೆ ಗಮನಹರಿಸುವುದು ಬಿಟ್ಟು ಜನರನ್ನು ಲೂಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ವಾಸ್ತವಕ್ಕೆ ದೂರವಾದ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅದನ್ನು ಈಡೇರಿಸುವುದು ಕಷ್ಟ ಎಂದು ಕಾಂಗ್ರೆಸ್ ಗೆ ಈಗ ಮನವರಿಕೆಯಾಗಿದೆ. ಕಾಂಗ್ರೆಸ್ ನ ಸುಳ್ಳು ಭರವಸೆಗಳ ಬಗ್ಗೆ ದೇಶದ ಜನ ಈಗ ಜಾಗೃತರಾಗಬೇಕಾದ ಕಾಲ ಬಂದಿದೆ ಎಂದು ಮೋದಿ ಎಚ್ಚರಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಸರ್ಕಾರಕ್ಕೆ ವೇತನ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಭರವಸೆ ನೀಡಿದ ಸಾಲ ಮನ್ನಾ ಯಾವಾಗ ಆಗುತ್ತದೋ ಎಂದು ಜನ ಕಾದು ಕೂತಿದ್ದಾರೆ. ಛತ್ತೀಸ್ ಘಡ ಮತ್ತು ರಾಜಸ್ಥಾನದಲ್ಲಿ ಕೆಲವು ಭರವಸೆಗಳನ್ನು ನೀಡಿರುವುದನ್ನು ಇಂದಿಗೂ ಪೂರೈಸಿಲ್ಲ. ಕಾಂಗ್ರೆಸ್ ನ ಇಂತಹ ಅನೇಕ ಉದಾಹರಣೆಗಳಿವೆ ಎಂದು ಮೋದಿ ಸುದೀರ್ಘ ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಆಸ್ತಿ ಒಂದಿಂಚೂ ನಮಗೆ ಬೇಡ, ವಕ್ಫ್ ಆಸ್ತಿ ದಾನಿಗಳು ನೀಡಿದ್ದು: ಜಮೀರ್ ಅಹ್ಮದ್