Select Your Language

Notifications

webdunia
webdunia
webdunia
webdunia

ಜನರ ಆಸ್ತಿ ಒಂದಿಂಚೂ ನಮಗೆ ಬೇಡ, ವಕ್ಫ್ ಆಸ್ತಿ ದಾನಿಗಳು ನೀಡಿದ್ದು: ಜಮೀರ್ ಅಹ್ಮದ್

Zameer Ahmed Khan

Krishnaveni K

ಬೆಂಗಳೂರು , ಶುಕ್ರವಾರ, 1 ನವೆಂಬರ್ 2024 (14:55 IST)
ಬೆಂಗಳೂರು: ರಾಜ್ಯದಲ್ಲಿ ವಕ್ಫ್ ನೋಟಿಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೇ ವಕ್ಫ್ ಸಚಿವ ಜಮೀರ್ ಅಹ್ಮದ್ ಜನರ ಆಸ್ತಿಯನ್ನು ಒಂದಿಂಚೂ ತೆಗೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

ವಕ್ಫ್ ಬೋರ್ಡ್ ರೈತರ ಜಮೀನುಗಳಿಗೆ ನೋಟಿಸ್ ನೀಡಿರುವ ವಿಚಾರ ಭಾರೀ ವಿವಾದಕ್ಕೀಡಾಗಿದೆ. ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಆಸ್ತಿಯನ್ನು ರಾಷ್ಟ್ರೀಕೃತಗೊಳಿಸಿ ಎಂದು ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಧಾರವಾಡ, ಕಲಬುರಗಿ, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ರೈತರ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಇಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನಾವು ಈಗಾಗಲೇ ಹೇಳಿದ್ದೇವೆ. ಸಿಎಂ ಸಿದ್ದರಾಮಯ್ಯನವರೂ ಹೇಳಿದ್ದಾರೆ. ನಾವು ಸಾಮಾನ್ಯ ಜನರ ಒಂದಿಂಚೂ ತೆಗೆದುಕೊಳ್ಳಲ್ಲ? ಅದು ಹೆಂಗ್ರಿ ಸಾಮಾನ್ಯ ಜನರ ಆಸ್ತಿ ಕಿತ್ತುಕೊಳ್ಳಕ್ಕೆ ಆಗುತ್ತೆ? ವಕ್ಫ್ ಆಸ್ತಿ ಎಂದರೆ ಅದು ದಾನಿಗಳು ನೀಡಿದ ಆಸ್ತಿ ಎಂದರ್ಥ. 1,12 ಸಾವಿರ ಎಕರೆ ಒಟ್ಟು ವಕ್ಫ್ ಆಸ್ತಿಯಿದೆ. ಇದರಲ್ಲಿ ಸ್ವಲ್ಪ ಮಾತ್ರವೇ ನೋಟಿಫಿಕೇಷನ್ ಮಾಡಲು ಬಾಕಿಯಿದೆ. ಅದನ್ನಷ್ಟೇ ಮಾಡುತ್ತಿದ್ದೇವೆ. ಒಂದು ವೇಳೆ ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ಅದನ್ನು ಸರಿಪಡಿಸುತ್ತೇವೆ. ಈ ಬಗ್ಗೆ ನಾನು ಸದ್ಯದಲ್ಲೇ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ಕೊಡುತ್ತೇನೆ. ಬಿಜೆಪಿಯವರ ಕಾಲದಲ್ಲೂ ವಕ್ಫ್ ಆಸ್ತಿ ನೋಟಿಸ್ ಆಗಿತ್ತು’ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯೋತ್ಸವ ಆಚರಣೆ ವೇಳೆ ತಪ್ಪು ತಪ್ಪಾಗಿ ಕನ್ನಡ ಭಾಷಣ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ