Publish Date: Sun, 08 Oct 2017 (10:47 IST)
Updated Date: Sun, 08 Oct 2017 (10:48 IST)
ಬೆಂಗಳೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಜಮೀರ್ ಅಹಮ್ಮದ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
‘ಪಾಪ ಜಮೀರ್ ಒಬ್ಬ ಮುಸ್ಲಿಂ ಮಾಸ್ ಲೀಡರ್. ಕುಮಾರಸ್ವಾಮಿ ಪಾಪ ಅವರನ್ನು ಮಂತ್ರಿ ಮಾಡಿದ್ದ. ಆತ ಈಗ ಕಾಂಗ್ರೆಸ್ ನ ದೊಡ್ಡ ಲೀಡರ್. ಬಹುಶಃ ಮುಂದೆ ಅಲ್ಲಿ ಮುಖ್ಯಮಂತ್ರಿ ಆಗ್ಬಹುದೇನೋ’ ಎಂದು ದೇವೇಗೌಡರು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿರುವ ಜಮೀರ್ ಅಹಮ್ಮದ್ ಇತ್ತೀಚೆಗೆ ಕಾಂಗ್ರೆಸ್ ಮಹಾ ಸಮುದ್ರವಿದ್ದಂತೆ. ಜೆಡಿಎಸ್ ಕೊಳವಿದ್ದಂತೆ ಎಂದಿದ್ದರು. ಇತ್ತೀಚೆಗೆ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಜಮೀರ್ ಅಹಮ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಜೆಡಿಎಸ್ ವರಿಷ್ಠ ದೇವೇಗೌಡ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ