Photo Credit: Social media
ನೆಲಮಂಗಲ: ಹಳೇ ಗರ್ಲ್ ಫ್ರೆಂಡ್ ಗೆ ಅಶ್ಲೀಲ ಮೆಸೇಜ್ ಹಾಕಿದ್ದಕ್ಕೆ ಯುವಕರ ಗುಂಪೊಂದು ಓರ್ವ ಯುವಕನನ್ನು ಬಟ್ಟೆ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಕುಶಾಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಾಲೇಜಿಗೆ ಹೋಗುತ್ತಿದ್ದಾಗ ಕುಶಾಲ್ ಮತ್ತು ಓರ್ವ ಯುವತಿ ನಡುವೆ ಪ್ರೇಮ ಸಂಬಂಧವಿತ್ತು. ಕೆಲವು ತಿಂಗಳ ಹಿಂದೆ ಇವರ ಪ್ರೀತಿ ಮುರಿದುಬಿದ್ದಿತ್ತು. ಇದೀಗ ಯುವತಿ ಬೇರೊಬ್ಬನ ಜೊತೆ ಸಲುಗೆಯಿಂದಿದ್ದಳು. ಇದನ್ನು ಸಹಿಸಲಾಗದ ಕುಶಾಲ್ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ.
ಇದೇ ಕಾರಣಕ್ಕೆ ಯುವತಿ ಗೆಳೆಯ ಮತ್ತು ಆತನ ಸಂಗಡಿಗರು ಸೇರಿಕೊಂಡು ಕುಶಾಲ್ ನನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಶೇಷವೆಂದರೆ ಥಳಿಸುವಾಗ ನೀನೂ ರೇಣುಕಾಸ್ವಾಮಿ ಥರಾ ಕೊಲೆಯಾಗ್ತೀಯಾ ಎಂದು ಬೆದರಿಕೆ ಹಾಕಿದ್ದಾರೆ.
ಹಲ್ಲೆಯ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.