Publish Date: Mon, 26 Feb 2024 (16:30 IST)
Updated Date: Mon, 26 Feb 2024 (17:05 IST)
ಬೆಂಗಳೂರು : ರಾತ್ರಿ ವೇಳೆ ಸುಮಾರು 50 ಕ್ಕೂ ಹೆಚ್ಚು ಯುವಕರು ಅಕ್ರಮವಾಗಿ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಈ ವೇಳೆ ರಾಜೇಶ್ ಬೈಕ್ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು. ತುಮಕೂರು ಹೆದ್ದಾರಿಯಲ್ಲಿ ಯುವಕರ ವೀಲಿಂಗ್ ಹುಚ್ಚಾಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ನೆಲಮಂಗಲದ ಬಳಿಯಿರುವ ನವಯುಗ ಟೋಲ್ ಬಳಿ ನಡೆದಿದೆ.
ದಾಸರಹಳ್ಳಿ ನಿವಾಸಿ ರಾಜೇಶ್ (20) ಮೃತ ಯುವಕನಾಗಿದ್ದು ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.ನೆಲಮಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
geetha
Publish Date: Mon, 26 Feb 2024 (16:30 IST)
Updated Date: Mon, 26 Feb 2024 (17:05 IST)