Publish Date: Mon, 03 Sep 2018 (14:20 IST)
Updated Date: Mon, 03 Sep 2018 (14:23 IST)
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಜನ ಸ್ನೇಹಿ ಸಂಘ ಕಳೆದ ವರ್ಷದಿಂದ ಜನ ಮೆಚ್ಚುವ ಕೆಲಸ ಮಾಡುತ್ತಿದೆ. ಹುತಾತ್ಮಯೋಧರ ಕುಟುಂಬಕ್ಕೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಮಾಡಿ ಭಕ್ತಿ ಪೂರಕ ನಮನ ಸಲ್ಲಿಸುತ್ತಿದ್ದಾರೆ. ಸ್ವಾತಂತ್ರೋತ್ಸವದ ದಿನದಂದು ಸಂಗ್ರಹಿಸಿದ ಸೈನಿಕರ ನಿಧಿಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡುತ್ತಾ ಬರುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಯುಕರದೊಂದೇ ಆಸೆ ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರ ಸೂಕ್ತ ಸವಲತ್ತು ನೀಡಲಿ ಎನ್ನುವುದಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಫೆಬ್ರವರಿ ಎರಡರಂದು ವೀರ ಮರಣ ಹೊಂದಿದ ಜಿಲ್ಲೆಯ ಹೆಮ್ಮೆಯ ಮಗನಾದ ಚಂದ್ರಶೇಖರ ಡವಗಿ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಜೊತೆಗೆ ಯುವ ಪೀಳಿಗೆಯಲ್ಲಿ ದೇಶ ಪ್ರೇಮ ತುಂಬುವ ಕೆಲಸ ಕೂಡಾ ನಡೆಯಿತು. ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.