Select Your Language

Notifications

webdunia
webdunia
webdunia
webdunia

ಕಚೇರಿ ಒಳಗಡೆಯೇ ಮಾಜಿ ಪ್ರೇಯಸಿಯನ್ನು ಕೊಚ್ಚಿಕೊಂದ ಯುವಕ, Video

Mohali Office Murder Video
Photo Courtesy X
ಬೆಂಗಳೂರು:  ಯುವತಿಯ ಮೇಲೆ ಸಹೋದ್ಯೋಗಿಯೇ ಚಾಕುವಿನಿಂದ ದಾಳಿ ನಡೆಸಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಹಂತ-11 ರ ಬೆಸ್ಟೆಕ್ ಮಾಲ್ ಬಳಿಯ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ನೋಡುವಾಗ ಭಯ ಹುಟ್ಟಿಸುತ್ತದೆ.

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಹರ್ಜಿಂದರ್ ಸಿಂಗ್ ಮಾನ್ ಅಲಿಯಾಸ್ ಹ್ಯಾರಿ ಹಾಗೂ ಮೃತ ಯುವತಿ ನಡುವೆ ಪ್ರೀತಿಯಾಗಿತ್ತು. 6 ತಿಂಗಳ ಹಿಂದೆ ಇವರಿಬ್ಬರ ನಡುವೆ ಬ್ರೇಕಪ್‌ ಆಗಿತ್ತು. 

ಗುರುವಾರದಂದು ಸಂಜೆ 7.40ರ ಸುಮಾರಿಗೆ ಆರೋಪಿ ಕಂಪನಿಯೊಳಗೆ ಬಂದಿದ್ದಾನೆ. ಯುವತಿಯ ಹಿಂದೆಯಿಂದ ಬಂದವನು ಏಕಾಏಕಿ ಆಕೆಯ ಮೇಲೆ ದಾಳಿ ಮಾಡಲು ಆರಂಭಿಸಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಯುವತಿ ಯತ್ನಿಸಿದ್ದಾಳೆ. ಆದರೆ ಆತ ನಿರಂತರವಾಗಿ ಆಕೆಯ ಮೇಲೆ 25-30 ಬಾರಿ ಹಲ್ಲೆ ನಡೆಸಿದ್ದಾನೆ. 

ಈ ವೇಳೆ ಯುವತಿಯ ರಕ್ಷಣೆಗೆ ಸಹೋದ್ಯೋಗಿಗಳು ಮುಂದಾಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯುವತಿ ಮೇಲೆ ದಾಳಿ ಬಳಿಕ  ಹರ್ಜಿಂದರ್ ಸಿಂಗ್ ಕೂಡಾ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಪೊಲೀಸರು ಕೊಲೆ ಎಫ್‌ಐಆರ್ ದಾಖಲಿಸಿದ್ದಾರೆ, ಚಾಕುವನ್ನು ವಶಪಡಿಸಿಕೊಂಡಿದ್ದಾರೆ.<blockquote class="twitter-tweet"><p lang="en" dir="ltr"><a href="https://x.com/hashtag/Watch?src=hash&amp;ref_src=twsrc%5Etfw">#Watch</a> | A woman working at a private company in Punjab&#39;s Mohali was stabbed to death by her colleague - believed to be her ex-boyfriend - in the office after an argument over their relationship status. The accused, identified as Harvinder Mann alias Harry, later attempted to die… <a href="https://t.co/dYW3aijIJ5">pic.twitter.com/dYW3aijIJ5</a></p>&mdash; NDTV (@ndtv) <a href="https://x.com/ndtv/status/2062748858782736705?ref_src=twsrc%5Etfw">June 5, 2026</a></blockquote> <script async src="https://platform.x.com/widgets.js" charset="utf-8"></script>



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ