Select Your Language

Notifications

webdunia
webdunia
webdunia
webdunia

ಯುವತಿಯರೇ ಎಚ್ಚರ- ಮಾಡೆಲ್ ಮಾಡುವ ನೆಪದಲ್ಲಿ ಖಾಸಗಿ ಫೋಟೋಗೆ ಡಿಮ್ಯಾಂಡ್

ಯುವತಿಯರೇ ಎಚ್ಚರ- ಮಾಡೆಲ್ ಮಾಡುವ ನೆಪದಲ್ಲಿ ಖಾಸಗಿ ಫೋಟೋಗೆ ಡಿಮ್ಯಾಂಡ್
bangalore , ಗುರುವಾರ, 13 ಜನವರಿ 2022 (19:48 IST)
ಇದು ಫೇಸ್ಬುಕ್, ಇನ್ಸ್ಟಾಗ್ರಾಂ ಕಾಲ.. ಸಾಮಾಜಿಕ ಜಾಲತಾಣದಲ್ಲಿ ಕೊಂಚ ಮೈ ಮರೆತ್ರೂ ನಾವು ಮೋಸದ ಜಾಲಕ್ಕೆ ಬೀಳುವ ಸಾಧ್ಯತೆಗಳಿರುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಯೊಬ್ಬ ಯುವತಿಯರಿಗೆ ಮಾಡೆಲಿಂಗ್ ಆಸೆ ತೋರಿಸಿ ಮಹಾಮೋಸ ಮಾಡಿದ್ದಾನೆ. ಕೇಸ್ ಒಂದರ ಬೆನ್ನತ್ತಿದ ಪೊಲೀಸರೇ ಆ ಆಸಾಮಿಯ ಕೃತ್ಯ ಕಂಡು ಶಾಕ್ ಆಗಿದ್ದಾರೆ.ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡ್ತಿರೋ ಪ್ರಪಂಚ್ ಎಂಬಾತ ಮಹಿಳೆಯರ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಫೇಕ್ ಖಾತೆಗಳನ್ನು ತೆಗೆದು ಯುವತಿಯರನ್ನು ಪರಿಚಯ ಮಾಡಿಕೊಳ್ತಿದ್ದ. ಹುಡುಗಿಯರು ಪರಿಚಯವಾಗ್ತಿದ್ದಂತೆ ನಿಮ್ಮನ್ನು ದೊಡ್ಡ ಮಾಡೆಲ್ ಮಾಡ್ತೀನಿ, ಕೈ ತುಂಬಾ ದುಡ್ಡು ಸಿಗೋಹಾಗೆ ಮಾಡ್ತೀನಿ ಅಂತ ಫುಂಗಿ ಬಿಡ್ತಿದ್ದ.
 
ಇವನ ಮಾತು ಕೇಳಿ ಯುವತಿಯರು ಮರುಳಾಗ್ತಿದ್ದಂತೆ ಮಾಡೆಲಿಂಗ್ ಫೋಟೋ ಕಳಿಸುವಂತೆ ಕೇಳುತ್ತಿದ್ದ. 35 ರಿಂದ 40 ಸಾವಿರ ಕೊಡುವ ಭರವಸೆ ನೀಡ್ತಿದ್ದ. ಅಲ್ಲದೇ ಹಲವರಿಗೆ ಹಣ ಹಾಕಿರೋದಾಗಿ ನಂಬಿಸಲು ನಕಲಿ ಯುಪಿಐ ಪೇಮೆಂಟ್ ರೆಸಿಪ್ಟ್ ಕೂಡ ಕಳುಹಿಸ್ತಿದ್ದ. ಹೀಗೆ ಫೋಟೋ ಕಳುಹಿಸುವವರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ನಂಬಿಸಿ ನಗ್ನ ಫೋಟೋ ಹಾಗು ವಿಡಿಯೊಗೆ ಡಿಮ್ಯಾಂಡ್ ಮಾಡ್ತಿದ್ದ. ಬಳಿಕ ಆ ಫೋಟೋಗಳನ್ನೇ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡ್ತಿದ್ದ

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡ್ತಿರೋ ಪ್ರಪಂಚ್ ಎಂಬಾತ ಮಹಿಳೆಯರ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಫೇಕ್ ಖಾತೆಗಳನ್ನು ತೆಗೆದು ಯುವತಿಯರನ್ನು ಪರಿಚಯ ಮಾಡಿಕೊಳ್ತಿದ್ದ. ಹುಡುಗಿಯರು ಪರಿಚಯವಾಗ್ತಿದ್ದಂತೆ ನಿಮ್ಮನ್ನು ದೊಡ್ಡ ಮಾಡೆಲ್ ಮಾಡ್ತೀನಿ, ಕೈ ತುಂಬಾ ದುಡ್ಡು ಸಿಗೋಹಾಗೆ ಮಾಡ್ತೀನಿ ಅಂತ ಫುಂಗಿ ಬಿಡ್ತಿದ್ದ.
 
ಇವನ ಮಾತು ಕೇಳಿ ಯುವತಿಯರು ಮರುಳಾಗ್ತಿದ್ದಂತೆ ಮಾಡೆಲಿಂಗ್ ಫೋಟೋ ಕಳಿಸುವಂತೆ ಕೇಳುತ್ತಿದ್ದ. 35 ರಿಂದ 40 ಸಾವಿರ ಕೊಡುವ ಭರವಸೆ ನೀಡ್ತಿದ್ದ. ಅಲ್ಲದೇ ಹಲವರಿಗೆ ಹಣ ಹಾಕಿರೋದಾಗಿ ನಂಬಿಸಲು ನಕಲಿ ಯುಪಿಐ ಪೇಮೆಂಟ್ ರೆಸಿಪ್ಟ್ ಕೂಡ ಕಳುಹಿಸ್ತಿದ್ದ. ಹೀಗೆ ಫೋಟೋ ಕಳುಹಿಸುವವರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ನಂಬಿಸಿ ನಗ್ನ ಫೋಟೋ ಹಾಗು ವಿಡಿಯೊಗೆ ಡಿಮ್ಯಾಂಡ್ ಮಾಡ್ತಿದ್ದ. ಬಳಿಕ ಆ ಫೋಟೋಗಳನ್ನೇ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡ್ತಿದ್ದ.
 
3 ಮೊಬೈಲ್.. 1000 ಖಾಸಗಿ ಫೋಟೋ.. 400 ನಗ್ನ ವಿಡಿಯೋ
ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಈತನ ಮೂರು ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳೆದ ಎರಡು ವರ್ಷದಿಂದ ಈ ಕೃತ್ಯ ನಡೆಸ್ತಿರೋದು ಗೊತ್ತಾಗಿದೆ. ಯುವತಿಯರ ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಫೋಟೋಗಳು, 300 ರಿಂದ 400 ಕ್ಕೂ ಹೆಚ್ಚು ನಗ್ನ ವಿಡಿಯೋ ಇರೋದು ಗೊತ್ತಾಗಿದೆ. ಸಾಮಾಜಿಕ ಜಾಲಾತಾಣವೆಂಬ ಮಾಯಾಜಾಲದಲ್ಲಿ ಕೊಂಚ ಮೈಮರೆತ್ರೂ ಮರ್ಯಾದೆ ಹರಾಜಾಗುತ್ತೆ. ಹೀಗಾಗಿ ಯುವತಿಯರು ಯಾಱರನ್ನೋ ನಂಬುವ ಮುನ್ನ ಎಚ್ಚರವಾಗಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಚ್ಚರಿಕೆ ಮೋದಿ ಭಾಷಣ