Select Your Language

Notifications

webdunia
webdunia
webdunia
webdunia

ಯೂ ಟರ್ನ್​ ಹೊಡೆದ ಸಿಎಂ!

ಬಿಎಸ್ವೈ
ಮೈತ್ರಿ ಸರಕಾರ ಉರುಳಿಸಲು ಆಪರೇಷನ್ ಕಮಲವನ್ನು ಬಿಜೆಪಿ ನಡೆಸುತ್ತಿದೆ ಎಂದು ದೂರಿ, ಆಡಿಯೋವೊಂದನ್ನು ಬಿಡುಗಡೆಮಾಡಿದ್ದ ಕುಮಾರಸ್ವಾಮಿ ಈಗ ಯೂ ಟರ್ನ್ ಹೊಡೆದಿದ್ದಾರೆ.

 ಆಡಿಯೋದಲ್ಲಿರುವ ಆಡಿಯೋ ಧ್ವನಿಯು ಬಿ.ಎಸ್.ಯಡಿಯೂರಪ್ಪನವರದ್ದು ಅಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಆಡಿಯೋದಲ್ಲಿರುವ ಧ್ವನಿಯು ಬಿ.ಎಸ್.ಯಡಿಯೂರಪ್ಪನವರದ್ದು ಎಂದು ನಾನು ಹೇಳಿಲ್ಲ. ಹೀಗಂತ ಸಿಎಂ ಹೇಳಿದ್ದಾರೆ.

ಆಡಿಯೋ ಕುರಿತು ಸಮಗ್ರವಾಗಿ ತನಿಖೆಯಾಗಬೇಕು ಎಂದ ಅವರು, ಪ್ರಧಾನ ಮಂತ್ರಿ ಸಹಕಾರ ನೀಡಿದರೆ ಅವರ ನೇತೃತ್ವದಲ್ಲಿ ತನಿಖೆಗೆ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.

ಆಡಿಯೋ ಸತ್ಯಾಸತ್ಯತೆ ಕುರಿತು ಬಹಿರಂಗವಾಗಬೇಕು ಎಂದ ಅವರು, ಆಡಿಯೋದಲ್ಲಿ ಸಭಾಪತಿ ಸೇರಿದಂತೆ ಬಿಜೆಪಿ ಪ್ರಮುಖರ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ತನಿಖೆ ಅಗತ್ಯ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಲಂಚ ಕೇಳಿದ ವಿಡಿಯೋ ನಮ್ಮಲ್ಲಿದೆ ಎಂದ ಶಾಸಕ!