Select Your Language

Notifications

webdunia
webdunia
webdunia
webdunia

ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನ ಸ್ವಾಗತಿಸಿದ ಯಡಿಯೂರಪ್ಪ

ಯಡಿಯೂರಪ್ಪ
ಬೆಂಗಳೂರು-ನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನ ಸ್ವಾಗತಿಸಿದ್ದಾರೆ.ಶಾಮನೂರು ಅವರು ನಮ್ಮ ಸಮಾಜದ ಹಿರಿಯ ಮುಖಂಡರು.ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ತಂದಿದೆ.ಶಾಮನೂರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
 
ಇನ್ನೂ ರಾಮ ಮಂದಿರ ಉದ್ಘಾಟನೆ ಆಗಿದೆ.. ನರೇಂದ್ರ ಮೋದಿ ನೇತೃತ್ವದಲ್ಲಿ ಆಗಿರೋದು ಹೆಮ್ಮೆಯ ವಿಷಯ.ಮೈಸೂರಿನಿಂದ ರಾಮಲಲ್ಲಾ ಮೂರ್ತಿ ತಯಾರಾಗಿರೋದು ವಿಶೇಷ.ಭಾರತ ‌ನಂ.1 ಸ್ಥಾನಕ್ಕೆ ತಲುಪಲಿದೆ.ಲೋಕಸಭಾ ಚುನಾವಣೆ ನಮಗೆಲ್ಲಾ ಸತ್ವ ಪರೀಕ್ಷೆ ಆಗಿದೆ.ಕಳೆದ ಚುನಾವಣೆಯಲ್ಲಿ 26 ಸಂಸದರ ಆಯ್ಕೆ ಆಗಿದೆ.ಈ‌ಬಾರಿ‌ 28ಕ್ಕೆ 28 ಸ್ಥಾನ‌ಗೆದ್ದು ಮೋದಿ ಅವರಿಗೆ‌ಕೊಡುಗೆ ನೀಡಬೇಕಿದೆ.
 
ಜಗದೀಶ್ ಶೆಟ್ಟರ್ ವಾಪಸ್ ಬಂದಿರೋದು ಪಕ್ಷಕ್ಕೆ ‌ಬಲ ತಂದಿದೆ.ಕಾಂಗ್ರೆಸ್ ನಲ್ಲಿ ಕಚ್ಚಾಟ ಜಾಸ್ತಿಯಾಗಿದೆ.ಜನ ಯಾಕಾದರೂ ಕಾಂಗ್ರೆಸ್ ಆಯ್ಕೆ ಮಾಡಿದ್ವಿ ಎಂದು‌ ಬೇಸತ್ತಿದ್ದಾರೆ.ಭಾರತವನ್ನು ಬಲಿಷ್ಠಗೊಳಿಸಲು ಈ ಚುನಾವಣೆ ಅನಿವಾರ್ಯ ಮೋದಿ ಅವರನ್ನ ಮತ್ತೆ ಪ್ರಧಾನಿಯಾಗಿ ಮಾಡೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿದ ಕಟ್ಟಡ