Select Your Language

Notifications

webdunia
webdunia
webdunia
webdunia

ಶೆಟ್ಟರ್ ಬಂದಿರೋದ್ರಿಂದ ನಮ್ಮ ಪಕ್ಷಕ್ಕೆ ಖಂಡಿತ ಒಳ್ಳೇದಾಗುತ್ತೆ- ಪ್ರಹ್ಲಾದ್ ಜೋಷಿ

ಪ್ರಹ್ಲಾದ್ ಜೋಷಿ

geetha

bangalore , ಶನಿವಾರ, 27 ಜನವರಿ 2024 (14:02 IST)
ಬೆಂಗಳೂರು-ಇಂಡಿಯಾ ಒಕ್ಕೂಟ ಒಂದು ಫೋಟೋ ಶೂಟ್ ಅಷ್ಟೇ ಆಗಿತ್ತು.ಇಂಡಿಯ ಒಕ್ಕೂಟದವರಿಗೆ ನೀತಿ, ನಿಯತ್ತು, ನೇತೃತ್ವ ಈ ಮೂರೂ ಇಲ್ಲ.ಅದೊಂದು ಅಸಹಜ, ಅಸ್ವಾಭಾವಿಕ ಒಪ್ಪಂದ ಆಗಿತ್ತು ಹಾಗಾಗಿ ಇಂಡಿಯ ಒಕ್ಕೂಟ ಸಾಯ್ತಿದೆ .ನಿತೀಶ್ ಕುಮಾರ್ ಬಿಜೆಪಿಗೆ ಸೇರುವ ಬಗ್ಗೆ ನಾನು ಏನೂ ಮಾತಾಡಲ್ಲ.ಅವರ ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ,ಅದರ ಬಗ್ಗೆ ಮಾತಾಡಲು ನಾನು ಸೂಕ್ತವೂ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
 
ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದ್ದು,ಜಗದೀಶ್ ಶೆಟ್ಟರ್ ಪಕ್ಷ ಸೇರ್ತಾರೆ ಅಂತ ಅರ್ಧ ಗಂಟೆ ಮುಂಚೆ ನನಗೆ ಜೆ ಪಿ ನಡ್ಡಾ ಮತ್ತು ಅಮಿತ್ ಶಾ ಅವರು ಮಾಹಿತಿ ಕೊಟ್ಟಿದ್ರು.ಆದ್ರೆ ನಾನು ಉಪರಾಷ್ಟ್ರಪತಿಗಳ ಜತೆಗೆ ಒಂದು ಕಾರ್ಯಕ್ರಮದಲ್ಲಿ ಇದ್ದೆ, ಅದಕ್ಕಾಗಿ ಸೇರ್ಪಡೆ ಕಾರ್ಯಕ್ರಮಕ್ಕೆ ಬರೋದಿಕ್ಕೆ ಆಗಲಿಲ್ಲ.ಶೆಟ್ಟರ್ ನಮ್ಮ ಪಕ್ಷದಲ್ಲೇ ಇದ್ದವರು, ಅವರು ವಾಪಸ್ ಬರ್ತಾರೆ ಅಂತ ನನಗೆ ಗೊತ್ತಿತ್ತು.ಶೆಟ್ಟರ್ ಬಂದಿರೋದ್ರಿಂದ ನಮ್ಮ ಪಕ್ಷಕ್ಕೆ ಖಂಡಿತ ಒಳ್ಳೇದಾಗುತ್ತೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಪ್ ಶಾಸಕರಿಗೆ 25 ಕೋಟಿ ಆಫರ್: ಬಿಜೆಪಿ ಮೇಲೆ ಕೇಜ್ರಿವಾಲ್ ಆರೋಪ