Select Your Language

Notifications

webdunia
webdunia
webdunia
webdunia

ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿದ ಕಟ್ಟಡ

ಬೆಂಕಿ
ಬೆಂಗಳೂರು- ನಗರದ ಪೇಯಿಂಟ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಬೆಂಕಿಯ ಕೆನ್ನಾಲೆಗೆಗೆ ಕಟ್ಟಡ ಹೊತ್ತಿ ಉರಿದಿದೆ.ಕಾಲಕ್ರಮೇಣ ಇಡಿ ಕಟ್ಟಡವನ್ನೇ ಬೆಂಕಿ ಆವರಿಸಿದೆ.ಕೆಳ ಮಹಿಡಿಯ ಪೇಯಿಂಟ್ ಶಾಪ್, ಮೊದಲ ಮಹಡಿಯಲ್ಲಿದ್ದ ಬ್ಯಾಗ್ ಅಂಗಡಿಗೆ ಬೆಂಕಿ ತಗುಲಿದೆ.ಕೆಲವೇ ನಿಮಿಷಗಳಲ್ಲಿ ಕಟ್ಟಡದಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ.
 
ಬರೊಬ್ಬರಿ‌ 30ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿಯಾಗಿದೆ.ವಿಚಾರ ತಿಳಿದ ಕೂಡಲೇ ಮಾಲೀಕ ಕೃಷ್ಣಮೂರ್ತಿ ಕುಟುಂಬ ಸ್ಥಳಕ್ಕೆ ದೌಡಯಿಸಿದೆ.ಬೆಂಕಿ ಅನಾಹುತ ಕಂಡು  ಕೃಷ್ಣಮೂರ್ತಿ ಕುಟುಂಬ ಕಣ್ಣೀರು ಹಾಕಿದೆ.20 ವರ್ಷಕ್ಕೂ ಹಿಂದಿನಿಂದ ಕಟ್ಟಡದಲ್ಲಿ ಪೆಯಿಂಟ್ ವ್ಯಾಪಾರ ಮಾಡ್ತಿದ್ರು.ಇದೇ ಮೊದಲ ಬಾರಿಗೆ ಈ ಅನಾಹುತವಾಗಿರೋದಾಗಿ ಮಾಹಿತಿ ನೀಡಿದ್ದಾರೆ.
 
ಇನ್ನೂ ಕಾರ್ಯಾಚರಣೆ ನಡುವೆ ಕಟ್ಟಡದ ಒಳಗೆ ಪ್ರವೇಶಿಸಿ ಯುವಕ ತಗಲಾಕಿಕೊಂಡಿದ್ದ.ಕೂಡಲೇ ಸಮಯ ಪ್ರಜ್ಞೆ ಮೆರೆದು ಯುವಕನನ ಅಗ್ನಿ ಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಜೆಸಿಬಿ ಬಳಸಿ ಕಟ್ಟಡದ ಶೆಟರ್ ಮುರಿದು ಬೆಂಕಿ ನಂದಿಸುವ ಕೆಲಸ ಯಶಸ್ವಿಯಾಗಿದೆ.ಸದ್ಯ ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ‌ ನಡೆಸಲಾಗ್ತಿದ್ದು,ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌‌‌ ನಡೆದಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ನಿಯಮದ ಬಗ್ಗೆ ಸಂಚಾರಿ ಪೊಲೀಸರ ಅಭಿಯಾನ