Publish Date: Fri, 12 Jul 2019 (16:07 IST)
Updated Date: Fri, 12 Jul 2019 (16:09 IST)
ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹೈಡ್ರಾಮಾ ನಡೆತಿರೋ ಹೊತ್ತಲ್ಲೇ ಜೆಡಿಎಸ್ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.
ಬಿಜೆಪಿಯು ಜೆಡಿಎಸ್ ಜೊತೆಗೆ ಕೈಜೋಡಿಸೋದಿಲ್ಲ. ಸರಕಾರ ರಚನೆಗೆ ಜೆಡಿಎಸ್ ಜೊತೆ ಸೇರಿ ತೆರೆ ಮರೆ ಯಾವುದೇ ಪ್ರಯತ್ನ ನಡೆದಿಲ್ಲ ಅಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದೋಸ್ತಿ ಸರಕಾರ ಶೀಘ್ರದಲ್ಲಿಯೇ ಕೊನೆಯಾಗಲಿದೆ. ಬಿಜೆಪಿ ನೇತೃತ್ವದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದ್ರು.
ಈ ಹಿಂದೆ ಜೆಡಿಎಸ್ ಜೊತೆ ಸೇರಿ ಸರಕಾರ ಮಾಡಿ ಕಹಿ ಅನುಭವ ಉಂಡಿದ್ದು ಸಾಕಾಗಿದೆ. ಹೀಗಾಗಿ ಜೆಡಿಎಸ್ ನ ರಾಜಕೀಯ ಸಹವಾಸ ಬೇಕಿಲ್ಲ ಅಂತ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.