ಯಡಿಯೂರಪ್ಪ ಕಾಲಿನ ಗುಣವೇ ಸರಿ ಇಲ್ವಂತೆ

ಬುಧವಾರ, 14 ಆಗಸ್ಟ್ 2019 (20:29 IST)
ಮೈತ್ರಿ ಸರಕಾರ ಪತನವಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಎಸ್ ವೈ ಕಾಲಿನ ಗುಣವೇ ಸರಿ ಇಲ್ವೇ ಇಲ್ಲ.

ಹೀಗಂತ ವ್ಯಂಗ್ಯವಾಡಿದ್ದಾರೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ.

ನೆರೆ ಪೀಡಿತರೊಂದಿಗೆ ಬಿಜೆಪಿ ಶಾಸಕರು ದರ್ಪದಿಂದ ಮಾತನಾಡುತ್ತಿದ್ದಾರೆ. ಹುನಗುಂದ ಹಾಲಿ ಶಾಸಕರು ಶಾಸಕರಾಗಿ ಇದ್ದಾರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದ್ರು.

ಪ್ರತಿ ಬಾರಿ ಪ್ರವಾಹ ಬಂದಾಗ 20ಕ್ಕೂ ಹೆಚ್ಚು ಹಳ್ಳಿಗಳು ನಮ್ಮ ಭಾಗದಲ್ಲಿ ತೊಂದರೆಗೆ ಒಳಗಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. ರಾಜ್ಯ ಸರಕಾರ ವಿತರಣೆ ಮಾಡಲು ಯೋಚಿಸಿರೋ ಪರಿಹಾರ ವಿತರಣೆ ಕ್ರಮ ಸರಿಯಾಗಿಲ್ಲ ಅಂತ ಟೀಕೆ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಕಾರಣಕ್ಕೆ ಶಾಸಕರ ಮನೆ ಮುಂದೆ ಅಹೋರಾತ್ರಿ ಕುಳಿತ ಮಂದಿ