Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕರಿಗೆ ಬಿಜೆಪಿ ಗೋರಿ ಕಟ್ಟಿದೆ; ನಾವು ಪೂಜೆ ಮಾಡ್ತೇವೆ

webdunia
ಬುಧವಾರ, 14 ಆಗಸ್ಟ್ 2019 (20:06 IST)
ಅನರ್ಹಗೊಂಡಿರೋ ಶಾಸಕರಿಗೆ ಕಮಲ ಪಾಳೆಯದ ಮುಖಂಡರು ಗೋರಿ ಕಟ್ಟಿದ್ದಾರೆ. ಹೀಗಂತ ಕೈ ಪಡೆಯ ಮುಖಂಡ ಟಾಂಗ್ ನೀಡಿದ್ದಾರೆ.

ಫೋನ್ ಟ್ಯಾಪಿಂಗ್ ವಿಚಾರವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದಲ್ಲಿ ಹೇಳಿಕೆ ನೀಡಿರೋ ಡಿಕೆಶಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ನಡೆದಿಲ್ಲ. ನಮ್ಮ ಸರ್ಕಾರದಲ್ಲಿ ಗೃಹ ಸಚಿವರಾಗಲಿ, ಸಿಎಂ ಆಗಲಿ ಯಾರೂ ಫೋನ್ ಕದ್ದಾಲಿಕೆ ಮಾಡಿಲ್ಲ. ಈಗ ಬಿಜೆಪಿ ಸರ್ಕಾರವಿದೆ. ಬೇಕಾದರೆ ತನಿಖೆ ನಡೆಸಲಿ ಎಂದರು.

ಫೋನ್ ಕದ್ದಾಲಿಕೆಯ ಬಗ್ಗೆ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅನರ್ಹ ಶಾಸಕರಿಗೆ ಗೋರಿ ಕಟ್ಟುತ್ತಿದ್ದಾರೆ. ಆ ಮೇಲೆ ನಾವು ಕೂಡ ಹೋಗಿ ಪೂಜೆ ಮಾಡಿಕೊಂಡು ಬರುತ್ತೇವೆ. ಹೀಗಂತ ಹೆಚ್. ವಿಶ್ವನಾಥ್ ಗೆ ಟಾಂಗ್ ಕೊಟ್ಟಿದ್ದಾರೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್.
Share this Story:

Follow Webdunia Hindi

ಮುಂದಿನ ಸುದ್ದಿ

ಸಿಟ್ಟಾದ ಕಾಡಾನೆ ತುಳಿದು ಕೊಂದದ್ದು ಯಾರನ್ನು ಗೊತ್ತಾ?