Publish Date: Wed, 14 Aug 2019 (15:48 IST)
Updated Date: Thu, 30 Jan 2020 (14:33 IST)
ಪ್ರಶ್ನೆ: ನನಗೆ 45 ವರ್ಷ. ನನ್ನ ಪತ್ನಿ ಪ್ರಿಯತಮೆಗೆ 25 ವರ್ಷಗಳು. ಸಮಾಗಮದ ಸಂದರ್ಭದಲ್ಲಿ ನೋವು ಕಡಿಮೆ ಮಾಡುವುದಕ್ಕಾಗಿ ನನ್ನ ಪತ್ನಿ ರತಿಸುಖಕ್ಕಿಂತ ಮುಂಚೆ ತನ್ನ ಗುಪ್ತಾಂಗಕ್ಕೆ Lox jelly ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ಖಾಸಗಿ ಅಂಗಗಳಿಗೆ ನಾವು ಕೆಲವು ತೈಲಗಳನ್ನು ಬಳಸುತ್ತಿದ್ದೇವೆ. ಇದು ಸರಿಯಾದ ಕ್ರಮವೇ?
ಉತ್ತರ: ರತಿಸುಖ ಅನುಭವಿಸೋಕೆ ಹೇಗೆ ಭಂಗಿಗಳನ್ನು ನೀವು ಟ್ರೈ ಮಾಡಿ ಸುಖ ಅನುಭವಿಸುತ್ತಿರೋ ಹಾಗೆ ನಿಮ್ಮ ಗೆಳತಿ ಯಾವ ತೈಲವನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಅನ್ನೋದನ್ನ ಅವಳ ವಿವೇಚನೆಗೆ ಬಿಟ್ಟು ಬಿಡಿ.
ಆದರೆ ನೀವು ಅವಳೊಂದಿಗೆ ಸಂಭೋಗಕ್ಕೂ ಮೊದಲು ನೋವು ಆಗದಂತೆ ಮಾಡಲು ಮುಂಕೇಳಿ ಹೆಚ್ಚಿಸಿಕೊಳ್ಳಬೇಕು. ಮೈಥುನಕ್ಕಿಂತ ಮುಂಚೆ ಆಕೆಯನ್ನು ಲೈಂಗಿಕವಾಗಿ ಪ್ರಚೋದಿಸುವ ಕೆಲಸ ಮಾಡಿ.
ಇದರಿಂದ ಆಕೆಗೆ ಮೈಥುನ ಸಮಯದಲ್ಲಿ ಹಿತ ಅನಿಸಬಹುದು. ಇಲ್ಲವೆಂದರೆ ಆಕೆ ನೋವು ಅನುಭವಿಸಬೇಕಾಗುತ್ತದೆ.