Publish Date: Tue, 30 Jul 2019 (12:45 IST)
Updated Date: Tue, 30 Jul 2019 (12:48 IST)
ಪ್ರಶ್ನೆ: ನಾನು ತುಂಬಾ ಪೋಲಿ ಪುಸ್ತಕಗಳನ್ನು ಓದಿರುವೆ. ಈಗೀಗ ನೀಲಿ ಚಿತ್ರಗಳನ್ನು ಮೊಬೈಲ್ ನಲ್ಲಿ ನೋಡುತ್ತಿರುವೆ. ನೀಲಿ ಚಿತ್ರಗಳನ್ನು ನೋಡುತ್ತಲೇ ಹಸ್ತ ಮೈಥುನ ಮಾಡಿಕೊಳ್ಳುತ್ತಿರುವೆ. ಆಗಾಗ್ಗೆ ವೈಶ್ಯಯರ ಸಂಗ ಬೆಳೆಸುತ್ತಿರುವೆ.
ಆದರೆ ನನಗೆ ನೀಲಿ ಚಿತ್ರಗಳಲ್ಲಿ ಮಾಡುವಂತೆ ಒಂದೇ ಸಮಯಕ್ಕೆ ಎರಡು, ಮೂರು ಹುಡುಗಿಯರ ಜತೆ ಮಜಾ ಮಾಡಬೇಕೆಂದು ಅನಿಸುತ್ತದೆ. ಆದರೆ ನನ್ನ ಕಾಮ ಶಕ್ತಿ ಹೆಚ್ಚಾಗಲು ಏನಾದರೂ ಸಲಹೆ ಇದ್ದರೆ ತಿಳಿಸಿ.
ಉತ್ತರ: ನೀವು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೂದು ಎಂದರೆ ಏಡ್ಸ್ ಮಹಾಮಾರಿ ಮನೆಗೆ ಹೋದಂತೆ ಎಂಬುದನ್ನು ಮರೆಯದಿರಿ. ಆದರೂ ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಲು ಈಗ ಅನೇಕ ವಿಧದ ಇಂಗ್ಲಿಷ್ ಔಷಧಗಳು ಲಭ್ಯವಿವೆ.
ಇನ್ನು ಮನೆ ಮದ್ದು ವಿಚಾರಕ್ಕೆ ಬರಬೇಕಾದರೆ ನಮ್ಮ ಪೂರ್ವಜರು ಹಲವು ರಸವನ್ನು ಸೇವನೆ ಮಾಡುತ್ತಿದ್ದರು. ಅದರಲ್ಲಿ ಪ್ರಮುಖವಾದದ್ದು ಕಾಮೇಶ್ವರ ರಸವಾಗಿದೆ.
ಜಾಜೀಕಾಯಿ, ಆಕಳಕರಿ, ಕರೇ ಮಡಗುಣಕಿಯ ಬೀಜ, ಜಾಜೀಮಲ್ಲಿಗೆ ಹೂವು, ಘಟಕದ ಅರಳು, ಅಫು, ಶುದ್ಧ ಬಚನಾಗ, ಇಂಗಳೀಕ(ಶುದ್ಧ ಮಾಡಿದ್ದು) ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವನ್ನು ಕಸಕಸಿ ಕಷಾಯದಲ್ಲಿ ಅರೆಯಬೇಕು.
ನಂತರ ಸಣ್ಣ ಪ್ರಮಾಣದ ಗುಳಿಗೆಗಳನ್ನು ಮಾಡಿ ಸಕ್ಕರೆಯ ಜತೆಗೆ ಸೇವನೆ ಮಾಡಬೇಕು. ಇದರಿಂದ ಪುರುಷರ ವೀರ್ಯ ಗಟ್ಟಿಯಾಗುವುದರ ಜತೆಗೆ ಅನೇಕ ಸ್ತ್ರೀಯರನ್ನು ಭೋಗಿಸುವ ಶಕ್ತಿ ಲಭಿಸುತ್ತದೆ. ಹೀಗಂತ ನಮ್ಮ ಹಿರಿಯರು ತಿಳಿಸಿದ್ದಾರೆ. ಆದರೆ ಒಂದೇ ಬಾರಿಗೆ ಹಲವು ಸ್ತ್ರೀಯರ ಜತೆ ಸಂಭೋಗ ನಡೆಸುವುದು ರೋಗಗಳನ್ನು ಮೈ ಮೇಲೆ ಎಳೆದುಕೊಂಡಂತೆಯೇ ಸರಿ ಎನ್ನೋದು ಮರೆಯದಿರಿ.