Select Your Language

Notifications

webdunia
webdunia
webdunia
webdunia

ಯಡಿಯೂರಪ್ಪಗೆ ಅಯೋಗ್ಯ ಪದಗಳು ಮಾತ್ರ ಗೊತ್ತಿವೆ: ಸಿಎಂ ಲೇವಡಿ

ಯಡಿಯೂರಪ್ಪಗೆ ಅಯೋಗ್ಯ ಪದಗಳು ಮಾತ್ರ ಗೊತ್ತಿವೆ:  ಸಿಎಂ ಲೇವಡಿ
ಕಲಬುರಗಿ , ಮಂಗಳವಾರ, 19 ಡಿಸೆಂಬರ್ 2017 (13:41 IST)
ಬಿಎಸ್ ಯಡಿಯೂರಪ್ಪ ಅವರಿಗೆ ನಾಲಾಯಕ್, ಅಯೋಗ್ಯ ಪದಗಳು ಬಿಟ್ಟರೆ ಬೇರೆ ಗೊತ್ತಿಲ್ಲ. ಹೀಗಾಗಿಯೇ ಹೋದಲ್ಲೆಲ್ಲ ಅವರು ಅದೇ ಪದಗಳನ್ನು ಬಳಸುತ್ತಿದ್ದಾರೆ. ಬೊಗಳೆ ದಾಸಯ್ಯ ಎಂಬಂತಹ  ಮಾತುಗಳನ್ನಾಡಿದ್ದಾರೆ. ನಾವು ಬೊಗಳೆ ದಾಸರಲ್ಲ.ಯಾರು ಬೊಗಳೆ ದಾಸರು ಎಂಬುದನ್ನು ತಿಳಿದುಕೊಳ್ಳಲು ಬಹಿರಂಗ ಚರ್ಚೆಗೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. 
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದು ಅವರಿಗೆ ಎಲ್ಲರೂ ಸಹಕಾರ ನೀಡಲಿದ್ದಾರೆ. ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕಾರಣ ಮುಂದುವರೆಸುತ್ತಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಕಲಬುರಗಿಯಲ್ಲಿ ಮಾತನಾಡಿದ ಮಾತನಾಡಿದ ಅವರು, 
 
ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ರಾಹುಲ್ ಗಾಂಧಿಯವರು ಯುವಕರಿಗೆ ಆದ್ಯತೆ ಸಿಗಲಿ ಎಂದಿದ್ದಾರೆ. ಹಿರಿಯರು ನಿವೃತ್ತಿಯಾಗಲಿ ಎಂದರ್ಥವಲ್ಲ. ಹಿರಿಯರ ಮಾರ್ಗದರ್ಶನದೊಂದಿಗೆ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದರು.
 
ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ‌ ಮಲ್ಲಮ್ಮಗೆ ಬಿಜೆಪಿಯವರು ಕಿರುಕುಳ‌ ನೀಡಿದ್ದರು. 
ಹಾಗಾಗಿ ಅವರು ಈ ಹಿಂದೆ ಸುಳ್ಳು ಹೇಳಿಕೆ ನೀಡಿದ್ದರು.  ಈಗ ಮಲ್ಲಮ್ಮ ಅವರಿಗೆ  ಅರಿವಾಗಿದೆ. ಹೀಗಾಗಿ‌ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಎಂದರು. 
 
ನಾವು ಬಹಿರಂಗ ಚರ್ಚೆಗೆ ಸಿದ್ಧ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು. ಸಿದ್ದರಾಮಯ್ಯ ಅಯೋಗ್ಯ ಎಂಬ ಯಡಿಯೂರಪ್ಪ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿಎಂ ಅಯೋಗ್ಯರು ಯಾರೆಂಬುದನ್ನು ಜನತೆ ಗುರುತಿಸುತ್ತಾರೆ ಅಂತ ಸಿಎಂ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಮ್ ಮಷಿನ್ ಸಂಶೋಧನೆಗೆ ಅವಕಾಶ ಕೋರಿದ ಸಚಿವ