Publish Date: Thu, 17 Sep 2020 (18:53 IST)
Updated Date: Thu, 17 Sep 2020 (18:58 IST)
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಬಡ್ಡಿ ತಂಡದ ನಾಯಕರಾಗಿದ್ದು, ಅವರಿಗೆ ಕ್ಯಾಚ್ ಹಾಕೋದೂ ಗೊತ್ತು, ರೈಡ್ ಮಾಡೋದು ಗೊತ್ತು.
ಹೀಗಂತ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಹಣಕಾಸಿನ ವಿಚಾರದಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಹಣಕಾಸಿನ ಯಾವುದೇ ತೊಂದರೆ ಇಲ್ಲ.
ನಾನು ಯಾವಾಗಲೋ ಹೇಳಿದೀನಿ.. ಯಡಿಯೂರಪ್ಪ ರಾಜಾಹುಲಿ ಅಂತಾ. ಅವರು ಒಂದ ತರಹ ಕಬಡ್ಡಿ ಟೀಂ ಕ್ಯಾಪ್ಟನ್ ಇದ್ದ ಹಾಗೆ ಅವರಿಗೆ ಕ್ಯಾಚ್ ಹಾಕೋದೂ ಗೊತ್ತು, ರೈಡ್ ಮಾಡೋದು ಗೊತ್ತು ಎಂದರು.
ರಾಜ್ಯದ ಅಭಿವೃದ್ಧಿಗಾಗಿ ಯಾವ ರೀತಿ ಹಣ ತರಬೇಕು ಎಂಬುದು ಅವರಿಗೆ ಗೊತ್ತಿದೆ. ಇದರಿಂದಾಗಿ ಇವತ್ತು ಸಿಎಂ ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮುಖ್ಯಸ್ಥರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಮನವೊಲಿಸಿ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚು ಹಣ ತರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದೂ ಅಶೋಕ್ ಸ್ಪಷ್ಟಪಡಿಸಿದರು.