Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಅವರಿಗೆ ಸಮಸ್ಯೆಗಳನ್ನು ನಿಭಾಯಿಸುವ ಅನುಭವ ಇದೆ- ಸಚಿವ ಪಿ.ಸೋಮಣ್ಣ

ಯಡಿಯೂರಪ್ಪ ಅವರಿಗೆ ಸಮಸ್ಯೆಗಳನ್ನು ನಿಭಾಯಿಸುವ ಅನುಭವ ಇದೆ- ಸಚಿವ ಪಿ.ಸೋಮಣ್ಣ
ಮೈಸೂರು , ಸೋಮವಾರ, 30 ಸೆಪ್ಟಂಬರ್ 2019 (12:24 IST)
ಮೈಸೂರು : ತಂತಿಯ ಮೇಲಿನ ನಡಿಗೆ ಎಂದು ಸಿಎಂ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ನಿನ್ನೆ ಮೊನ್ನೆ ಅವರು ಮೈಸೂರಿನಲ್ಲಿ ಖುಷಿಯಾಗಿಯೇ ಇದ್ದರು. ದಾವಣಗೆರೆಗೆ ಹೋದಾಗ ಏನಾಯ್ತು ಗೊತ್ತಿಲ್ಲ. ಸಿಎಂ ಆದ ಮೇಲೆ ಒತ್ತಡ ಇದ್ದೇ ಇರುತ್ತದೆ. ಯಡಿಯೂರಪ್ಪ ಅವರಿಗೆ ಅದನ್ನು ನಿಭಾಯಿಸುವ ಅನುಭವ ಇದೆ ಎಂದು ಹೇಳಿದ್ದಾರೆ.


ಅನರ್ಹ ಶಾಸಕರ ಬಗ್ಗೆ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉಮೇಶ್ ಕತ್ತಿ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಅವರಿಗೆ ರಾಜ್ಯವನ್ನು ಅಭಿವೃದ್ಧಿ ಮಾಡಬೇಕೆಂಬ ಆಸೆ ಇದೆ ಎಂದ ಅವರು, ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ, ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇವೆ. ಅದನ್ನು ಬಗೆಹರಿಸುವ ಶಕ್ತಿ ಯಡಿಯೂರಪ್ಪ ಅವರಿಗಿದೆ ಎಂದು ಅವರು ತಿಳಿಸಿದ್ದಾರೆ.    


Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ- ಸಿದ್ದರಾಮಯ್ಯ