Publish Date: Mon, 30 Sep 2019 (10:29 IST)
Updated Date: Mon, 30 Sep 2019 (10:33 IST)
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದು ಕೆ.ಎಸ್.ಮುನಿಯಪ್ಪಗೆ ಮುಳ್ಳಾಯಿತು ಎನ್ನಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಮುನಿಯಪ್ಪ ವಿರುದ್ಧ ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯಾಂ ಎಂಬುವವರಿಂದ ಕೆಪಿಸಿಸಿ ಸತ್ಯ ಶೋಧನಾ ಸಮಿತಿಗೆ ಲಿಖಿತ ದೂರು ನೀಡಿದ್ದಾರೆ. ಆಗಸ್ಟ್ 28ರಂದೇ ಮುನಿಯಪ್ಪ ವಿರುದ್ಧ ದೂರು ಸಲ್ಲಿಕೆಯಾಗಿದೆ ಎನ್ನಲಾಗಿದೆ.
ಕೋಲಾರದಲ್ಲಿ ಪಕ್ಷ ವಿರೋಧಿ ಕೆಲಸ ಹುಟ್ಟು ಹಾಕಿದ್ದು ಮುನಿಯಪ್ಪ. ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಮುನಿಯಪ್ಪರೇ ನೇರ ಕಾರಣ. 2008ರಿಂದಲೂ ಮುನಿಯಪ್ಪ ಪಕ್ಷ ವಿರೋಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಅಬ್ದುಲ್ ಖಯಾಂ ಅವರು ಮುನಿಯಪ್ಪ ವಿರುದ್ಧ ದೂರು ಸಲ್ಲಿಸಿದ್ದಾರೆ.