Select Your Language

Notifications

webdunia
webdunia
webdunia
webdunia

ಯಡಿಯೂರಪ್ಪಗೆ ಸೋಲಿನ ಭಯ ಶುರು: ತಿಮ್ಮಾಪುರ್ ಲೇವಡಿ

ಯಡಿಯೂರಪ್ಪಗೆ ಸೋಲಿನ ಭಯ ಶುರು: ತಿಮ್ಮಾಪುರ್ ಲೇವಡಿ
ಬಾಗಲಕೋಟೆ , ಭಾನುವಾರ, 17 ಸೆಪ್ಟಂಬರ್ 2017 (10:52 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸೋಲಿನ ಭಯ ಶುರುವಾಗಿದೆ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಯಡಿಯೂರಪ್ಪಗೆ ಸೋಲಿನ ಭಯ ಶುರುವಾಗಿದ್ದರಿಂದ ಉತ್ರ ಕರ್ನಾಟಕದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ಯಡಿಯೂರಪ್ಪ ಶಿವಮೊಗ್ಗದಲ್ಲಿಯೇ ಸ್ಪರ್ಧಿಸಲಿ ಅಥವಾ ಉತ್ತರ ಕರ್ನಾಟಕದಲ್ಲಿಯೇ ಸ್ಪರ್ಧಿಸಲಿ ಸೋಲು ಮಾತು ಖಚಿತ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಟಾಂಗ್ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರದರ್ಶಕವಾಗಿ, ಪ್ರಾಮಾಣಿಕತೆಯಿಂದ ಅಡಳಿತ ನಡೆಸುತ್ತಿದ್ದು, ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ತಿಮ್ಮಾಪುರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನದಂದು ನರ್ಮದಾ ಅಣೆಕಟ್ಟು ಉದ್ಘಾಟಿಸಲಿರುವ ಪ್ರಧಾನಿ ಮೋದಿ