Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆಗೆ ಯತೀಂದ್ರ ಸಿದ್ದರಾಮಯ್ಯ ಸ್ಫರ್ಧೆ ಡೌಟ್...!

ಲೋಕಸಭೆ ಚುನಾವಣೆಗೆ ಯತೀಂದ್ರ ಸಿದ್ದರಾಮಯ್ಯ ಸ್ಫರ್ಧೆ  ಡೌಟ್...!
bangalore , ಗುರುವಾರ, 17 ಆಗಸ್ಟ್ 2023 (13:21 IST)
ಲೋಕಸಭೆ ಚುನಾವಣೆಗೆ ಯತೀಂದ್ರ ಸಿದ್ದರಾಮಯ್ಯ ಸ್ಫರ್ಧೆ ಮಾಡುವುದು ಡೌಟ್ ಎನ್ನಲಾಗುತ್ತಿದೆ. ಹೀಗಂತ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.ಸಿಎಂ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದರಿಂದ ತಂದೆ ಕ್ಷೇತ್ರವನ್ನ ತಂದೆ ಗೆ  ಯತೀಂದ್ರ ಅವರು ಬಿಟ್ಟು ಕೊಟ್ಟಿದ್ದಾರೆ.ಆದರೆ ಮುಂದಿನ ನಡೆ ಏನು ಎಂದು ಚರ್ಚೆ ಆದಾಗ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು.ಆದರೆ ಈಗಾ ಸಿದ್ದರಾಮಯ್ಯ ಅವರು ಪುತ್ರನನ್ನು ರಾಷ್ಟ್ರ ರಾಜಕಾರಣಕ್ಕೆ ಬೇಡ ಎಂದು ಹೇಳುತ್ತಿದ್ದಾರೆ ಅಂತೆ ಹೀಗಂತ ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ಮಾತು ಕೇಳಿ ಬಂದಿದೆ.ಸಿದ್ದರಾಮಯ್ಯ ಅವರಿಗೆ ವಯಸ್ಸಾದ ಕಾರಣ ಮುಂಬರುವ ಚುನಾವಣೆಗಳಲ್ಲಿ  ಸ್ಫರ್ಧೆ ಮಾಡುವುದು ಬಹುತೇಕ ಕಡಿಮೆ ಎಂದು ಹೇಳಲಾಗುತ್ತಿದೆ ಆದ್ದರಿಂದ ಯತೀಂದ್ರ ಅವರನ್ನ ರಾಜ್ಯದಲ್ಲಿ ಪ್ರಮುಖನಾಯಕನಾಗಿ ಮಾಡಬೇಕು ಎಂಬುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.ನಂತರ ರಾಕೇಶ್ ಪುತ್ರನನ್ನು ರಾಜಕಾರಣಕ್ಕೆ ತರಬೇಕು ಎಂಬುದು ಸಿದ್ದರಾಮಯ್ಯ ಅವರ ಪ್ಲಾನ್ .ಯತೀಂದ್ರ ಅವರನ್ನ ರಾಷ್ಟ್ರ ರಾಜಕಾರಣಕ್ಕೆ ಕಳಿಸಿದ್ರೆ ರಾಜ್ಯ ರಾಜಕಾರಣದಲ್ಲಿ ಪ್ರಮುಖರಾಗಿ ಬೆಳೆಯುವುದಕ್ಕೆ ಕಷ್ಟ ಆಗಬಹುದು ಎಂಬುವುದು ಸಿದ್ದರಾಮಯ್ಯ ಅವರ ಆತಂಕ ಈ  ಹಿನ್ನಲೆ ಎಂಪಿ‌ ಚುನಾವಣೆಗೆ ಸ್ಫರ್ಧಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಹಾಗಾಗಿ ಯತೀಂದ್ರ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ತಡವಾಗಿ ಬಂದ ಮಗನಿಗೆ ಬುದ್ಧಿವಾದ ಹೇಳಿದ ತಾಯಿ: ಮಗ ಹೀಗೆ ಮಾಡೋದಾ?