Publish Date: Sat, 07 Feb 2026 (13:06 IST)
Updated Date: Sat, 07 Feb 2026 (13:09 IST)
ಬೆಂಗಳೂರು: ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎಂದು ವ್ಯಂಗ್ಯ ಮಾಡಿದ್ದ ಡಿಕೆ ಶಿವಕುಮಾರ್ ಗೆ ಪ್ರತಿಕ್ರಿಯಿಸಿದ್ದಾರೆ. ಯಾವಾಗ್ಲೂ ಹೈಕಮಾಂಡ್ ಹೈಕಮಾಂಡೇ ಎಂದಿದ್ದಾರೆ.
ಯತೀಂದ್ರ ನಿನ್ನೆ ಮಾಧ್ಯಮಗಳ ಮುಂದೆ ಸಿದ್ದರಾಮಯ್ಯನವರೇ ಐದು ವರ್ಷವೂ ಮುಂದುವರಿಯುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ್ಮೇಲೆ ಮುಗೀತು ಎಂದು ವ್ಯಂಗ್ಯ ಮಾಡಿದ್ದರು.
ಡಿಕೆಶಿ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿರುವ ಯತೀಂದ್ರ, ಯಾವತ್ತಿದ್ರೂ ಹೈಕಮಾಂಡ್ ಹೈಕಮಾಂಡೇ. ಹೈಕಮಾಂಡ್ ಅವರ ತೀರ್ಮಾನಕ್ಕೇ ಎಲ್ಲರೂ ಬದ್ಧರಾಗಿರುತ್ತಾರೆ. ಅವರು ಹೇಳಿದ್ದನ್ನೇ ನಾನೂ ಹೇಳಿದ್ದು. ಹೈಕಮಾಂಡ್ ನವರು ಸದ್ಯಕ್ಕೆ ಏನೂ ಹೇಳಿಲ್ಲ. ಅಲ್ಲಿಯವರೆಗೆ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ.
ಎಲ್ಲಾ ಪಕ್ಷಗಳಲ್ಲೂ ಮುಖ್ಯಮಂತ್ರಿಗಳ ಆಕಾಂಕ್ಷಿಗಳು, ಅರ್ಹತೆಯಿರುವವರು ಇರುತ್ತಾರೆ. ಆದರೆ ಎಲ್ಲದಕ್ಕೂ ಹೈಕಮಾಂಡ್ ನವರು ಏನೂ ಹೇಳಿಲ್ಲ. ಹಾಗಾಗಿ ಸಿದ್ದರಾಮಯ್ಯನವೇ ಮುಂದುವರಿಯುತ್ತಾರೆ. ಹೈಕಮಾಂಡ್ ನವರು ಏನಾದ್ರೂ ಹೇಳಿದ್ದಾರಾ? ಹಾಗಾಗಿ ಅವರೇ ಮುಂದುವರಿಯುತ್ತಾರೆ ಎಂದಿದ್ದಾರೆ.