Daily Horoscope

Select Your Language

Notifications

webdunia
webdunia
webdunia
webdunia

ಜನರಿಗೆ ತೊಂದರೆ ಕೊಡಲ್ಲ, ಮೆಟ್ರೋ ದರ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಡಿಕೆ ಶಿವಕುಮಾರ್

DK Shivakumar
ಬೆಂಗಳೂರು: ಜನರಿಗೆ ತೊಂದರೆ ಕೊಡಕ್ಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 9 ರಿಂದ ಮೆಟ್ರೋ ದರ ಶೇ.5 ರಷ್ಟು ಹೆಚ್ಚಳವಾಗುವುದಾಗಿ ಈಗಾಗಲೇ ಘೋಷಣೆಯಾಗಿದೆ. ಆದರೆ ಕಳೆದ ವರ್ಷವಷ್ಟೇ ಹೆಚ್ಚಳವಾಗಿತ್ತು. ಈಗ ಮತ್ತೆ ಒಂದೇ ವರ್ಷದ ಅಂತರದಲ್ಲಿ ಮತ್ತೆ ಏರಿಕೆ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ‘ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಯಾರೂ ನಮ್ಮ ಜೊತೆ ಚರ್ಚಿಸಿಲ್ಲ. ಮೆಟ್ರೋ ದರ ಪರಿಷ್ಕರಣೆ ಸಮಿತಿಗೆ ಕೇಂದ್ರ ಸರ್ಕಾರದವರೇ ಚೇರ್ಮೇನ್. ದರ ಹೆಚ್ಚಳ ಬಗ್ಗೆ ಈವತ್ತು ಅಥವಾ ನಾಳೆ ಅವರ ಜೊತೆಗೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡಲು ಬಿಡಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರಕ್ಕೆ ಸಿಎಂ ಅಥವಾ ಡಿಸಿಎಂ ಪತ್ರ ಬರೆಯಲಿ. ದರ ಕಡಿಮೆ ಮಾಡುವ ಜವಾಬ್ಧಾರಿ ನನ್ನದು ಎಂದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಏನಿದು ಹಿಂಗೆ ಆಗೋಯ್ತಲ್ಲಾ... ಎಸ್ಕಲೇಟರ್ ಹತ್ತಿದ ಬೆಕ್ಕು ಫುಲ್ ಕನ್ ಫ್ಯೂಸ್ Video