Publish Date: Sat, 07 Feb 2026 (11:47 IST)
Updated Date: Sat, 07 Feb 2026 (11:52 IST)
ಮನುಷ್ಯರ ತಂತ್ರಜ್ಞಾನಗಳು ಪ್ರಾಣಿಗಳಿಗೆ ತಲೆಬುಡ ಅರ್ಥವಾಗಲ್ಲ. ಇದೇ ರೀತಿ ಎಸ್ಕಲೇಟರ್ ಏರಲು ಹೋದ ಬೆಕ್ಕು ಫುಲ್ ಕನ್ ಫ್ಯೂಸ್ ಫನ್ನಿ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಬೆಕ್ಕುಗಳು ಸೂಕ್ಷ್ಮ ಸಂವೇದಿಗಳು. ಬಹುಬೇಗನೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಬುದ್ಧಿವಂತ ಜೀವಿಗಳು. ಆದರೆ ಇಲ್ಲೊಂದು ಬೆಕ್ಕು ಎಸ್ಕಲೇಟರ್ ಏರಲು ಹೋಗಿ ಇದೇನು ಆಗ್ತಿದೆ ಎಂದು ತಿಳಿಯದೇ ಕನ್ ಫ್ಯೂಸ್ ಆಗಿದೆ.
ಕೆಳಗೆ ಇಳಿಯುವ ಎಸ್ಕಲೇಟರ್ ಗೆ ಬೆಕ್ಕು ಏರಿದೆ. ಆರಾಮವಾಗಿಯೇ ಎಸ್ಕಲೇಟರ್ ಏರಿದ್ದ ಬೆಕ್ಕು ಸ್ವಲ್ಪ ಮೇಲೆ ಸಾಮಾನ್ಯ ಮೆಟ್ಟಿಲು ಏರುವಂತೆ ಹತ್ತಿಕೊಂಡು ಹೋಗಿದೆ. ಅರ್ಧಕ್ಕೆ ತಲುಪಿದ ಬಳಿಕ ಇದು ಏನಾಗ್ತಿದೆ ಎಂದು ತಿಳಿಯದೇ ಬೆಕ್ಕು ಅರ್ಧಕ್ಕೇ ಕೂತಿದೆ.
ಬೆಕ್ಕು ಕೂತಿದೆ ಎಂದು ಎಸ್ಕಲೇಟರ್ ನಿಲ್ಲುತ್ತಾ? ಅದರ ಸಹಜ ಪ್ರಕ್ರಿಯೆಯಂತೇ ಅದು ಮತ್ತೆ ಬೆಕ್ಕನ್ನು ಕೆಳಕ್ಕೆ ಕರೆತಂದಿದೆ. ಫುಲ್ ಕನ್ ಫ್ಯೂಸ್ ಆದ ಬೆಕ್ಕು ಕೆಳಗೆ ಬಂದು ಚಲಿಸುವ ಮೆಟ್ಟಿಲನ್ನು ನೋಡುತ್ತಾ ಕೂತಿದೆ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.