ಮಂಗಳವಾರದಿಂದ ಯಶವಂತಪುರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಒಂದು ಕ್ಲೋಸ್ ಆಗಲಿದೆ.ಜುಲೈ 18ರಿಂದ ಫ್ಲಾಟ್ ಫಾರ್ಮ್ 1ರ ಮೂಲಕ ರೈಲು ನಿಲ್ದಾಣದ ಪ್ರವೇಶವನ್ನು ಮುಚ್ಚಲಾಗುತ್ತಿದ್ದು.ಅಧಿಕಾರಿಗಳು ಈ ಭಾಗದಲ್ಲಿ ಪುನರಾಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದು,ಈ ಹಿನ್ನಲೆ ಈ ಪ್ಲಾಟ್ ಫಾರ್ಮ್ ಅಲ್ಲಿ ಪ್ರಯಾಣಿಕರಿಗೆ ಓಡಾಡಲು ಪ್ರವೇಶ ನಿರ್ಬಂಧಿಸಲಾಗಿದೆ.ತುಮಕೂರು ರಸ್ತೆಯ ಯಶವಂತಪುರ ಮೆಟ್ರೊ ನಿಲ್ದಾಣದ ಬಳಿ ಇರುವ ಪ್ಲಾಟ್‌ಫಾರ್ಮ್ 6 ಸೈಡ್ ಎಂಟ್ರಿಯಿಂದ ನಿಲ್ದಾಣಕ್ಕೆ ಪ್ರವೇಶ ಇರಲಿದೆ.ಜೊತೆಗೆ ನಿಲ್ದಾಣದಲ್ಲಿನ ಕಾಲು ಮೇಲ್ಸೇತುವೆಗಳ ಮೂಲಕ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಪಡೆಯುವಂತೆ ಸೂಚನೆ ನೀಡಲಾಗಿದೆ.ಪ್ರಯಾಣಿಕರ ಬಳಿ ಅಡಚಡಣೆಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಡಿಜಿಟಲ್ ಮಾಹಿತಿ ಫಲಕಗಳು ಕೂಡ ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ.ಎಲ್ಲಾ ರೈಲ್ವೇ ಸಂಬಂಧಿತ ಮಾಹಿತಿಯನ್ನು ಪ್ರಕಟಣೆಗಳ ಮೂಲಕ ಪ್ರಸಾರ ಮಾಡ್ತಿದ್ದು,ಸಾರ್ವಜನಿಕರು ಸಹಕರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.