Select Your Language

Notifications

webdunia
webdunia
webdunia
webdunia

ಈ ಪುಟ್ಟ ಬಾಲಕನಿಗೆ ಉಯ್ಯಾಲೆಯೇ ಉರುಳಾಯ್ತ!?

ಈ ಪುಟ್ಟ ಬಾಲಕನಿಗೆ ಉಯ್ಯಾಲೆಯೇ ಉರುಳಾಯ್ತ!?
ಮಂಗಳೂರು , ಸೋಮವಾರ, 17 ಜುಲೈ 2023 (08:58 IST)
ಮಂಗಳೂರು : ಮನೆಯಲ್ಲಿ ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕನೊಬ್ಬ ದುರ್ಮರಣಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಶ್ರೀಷಾ(14) ಎಂದು ಗುರುತಿಸಲಾಗಿದ್ದು, ಈತ 8 ನೇ ತರಗತಿಯಲ್ಲಿ ಓದುತ್ತಿದ್ದನು. ಭಾನುವಾರ ರಜೆ ಇದ್ದಿದ್ದರಿಂದ ಬಾಲಕ ಮನೆ ಅಂಗಳದಲ್ಲಿ ಸೀರೆಯಲ್ಲಿ ಮಾಡಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದನು. 

ಹೀಗೆ ಆಟವಾಡುತ್ತಿದ್ದಾಗ ಸೀರೆ ಆಕಸ್ಮಿಕವಾಗಿ ಶ್ರೀಷಾ ಕುತ್ತಿಗೆಗೆ ಬಿಗಿದಿದೆ. ಪರಿಣಾಮ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು