Select Your Language

Notifications

webdunia
webdunia
webdunia
webdunia

ಲ್ಯಾನ್ಸ್​ಡೌನ್​ ಉಳಿಸಲು ಯದುವೀರ್ ಹೋರಾಟ

Yadavir struggles to save Lance Down
bangalore , ಬುಧವಾರ, 20 ಏಪ್ರಿಲ್ 2022 (20:58 IST)
ಮೈಸೂರು ಜನರ ಹಾಗೂ ರಾಜಮನೆತನದ ವಿರೋಧದ ನಡುವೆಯೂ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್​ಡೌನ್​ ಕಟ್ಟಡವನ್ನು ನೆಲಸಮ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಸಾಥ್​ ನೀಡಿರುವ ವ್ಯಾಪಾರಸ್ಥರು ಅಂಗಡಿಗಳನ್ನು ಬುಧವಾರ ಮಧ್ಯಾಹ್ನದವರೆಗೆ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, 3 ವರ್ಷದಿಂದ ನಿಮ್ಮ‌ ಜತೆಯಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಪ್ರತಿಯೊಬ್ಬ ತಜ್ಞರೂ ಇದನ್ನು ಸಂರಕ್ಷಣೆ ಮಾಡಬಹುದು ಎಂದಿದ್ದಾರೆ. ಇನ್ನೂ ನೂರು ವರ್ಷ ಇದನ್ನು ಉಳಿಸಬಹುದು. ನಮ್ಮ ಪೂರ್ವಜರ ಜತೆ ಸೇರಿ ಇದನ್ನು ನೋಡಿಕೊಂಡು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರು ಕಲೆ ಎಂದುಕೊಂಡಿದ್ದೇವೆ. ನಮ್ಮ ಮುಂಬರುವ ಪೀಳಿಗೆಗೂ ಉಳಿಸಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಕೊವಿಡ್ ಇನ್ನೂ ಬಿಟ್ಟುಹೋಗಿಲ್ಲ’