Select Your Language

Notifications

webdunia
webdunia
webdunia
webdunia

‘ಕೊವಿಡ್ ಇನ್ನೂ ಬಿಟ್ಟುಹೋಗಿಲ್ಲ’

Kovid hasn't left yet
bangalore , ಬುಧವಾರ, 20 ಏಪ್ರಿಲ್ 2022 (20:55 IST)
ರಾಜ್ಯದಲ್ಲಿ 4ನೇ ಕೋವಿಡ್ ಅಲೆ ಸದ್ಯಕ್ಕೆ ಬಂದಿಲ್ಲವಾದರೂ ಜನರು ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಜನತೆಗೆ ಮನವಿ ಮಾಡಿದರು. ಕೊವಿಡ್-19 ಹೋಗೇಬಿಟ್ಟಿದೆ ಎಂದು ಯಾರೊಬ್ಬರೂ ಭಾವಿಸಬೇಡಿ. ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ಕೋವಿಡ್ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ. ಹಾಗಾಗಿ ಜನತೆ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿ ಸೇರಿದಂತೆ ಮತ್ತಿತರ ಕಡೆ ಕೆಲವು ಭಾಗಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದು 4ನೇ ಅಲೆಯ ಮುನ್ಸೂಚನೆ ಎಂಬುದರ ಬಗ್ಗೆ ದೃಢಪಟ್ಟಿಲ್ಲ. ಅಧ್ಯಯನದಿಂದ ತಿಳಿಯಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷವೇ 1, 2ನೇ ತರಗತಿಗೆ ‘NEP’ ಜಾರಿ