Select Your Language

Notifications

webdunia
webdunia
webdunia
webdunia

ಈ ವರ್ಷವೇ 1, 2ನೇ ತರಗತಿಗೆ ‘NEP’ ಜಾರಿ

ಈ ವರ್ಷವೇ 1
bangalore , ಬುಧವಾರ, 20 ಏಪ್ರಿಲ್ 2022 (20:52 IST)
ರಾಜ್ಯದ ಶಾಲಾಶಿಕ್ಷಣದಲ್ಲಿ 1 ಮತ್ತು 2 ನೇ ತರಗತಿಗೆ 2022-23 ನೇ ಸಾಲಿನಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.ಪೂರ್ವ ಪ್ರಾಥಮಿಕ ಅಥವಾ ಅಂಗನವಾಡಿ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು.ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ವಹಿಸಲಿದೆ. ಶಿಕ್ಷಣ ಇಲಾಖೆಯಿಂದ 1 ಮತ್ತು 2 ನೇ ತರಗತಿಗೆ ಈ ವರ್ಷ ಎನ್ ಇಪಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.ಪಠ್ಯ ಪುಸ್ತಕ ರಚನೆ ಎಲ್ಲವನ್ನೂ ಕುರಿತು ಕರಡುನಿಯಮಾವಳಿ ರೂಪಿಸಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧರಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ಧರಿಸಿದವರಿಗೆ ಅನುಮತಿ ಇಲ್ಲ