Publish Date: Tue, 12 Apr 2022 (19:42 IST)
Updated Date: Tue, 12 Apr 2022 (19:51 IST)
ಕನ್ನಡದ ಮೇರುನಟ ವರನಟ ಡಾ.ರಾಜ್ಕುಮಾರ್ ಅವರ 16ನೇ ವರ್ಷದ ಪುಣ್ಯತಿಥಿಯಿಂದು. ಕನ್ನಡದ ಕಂಪನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಮಹಾನುಭಾವ ನಟ ಡಾ.ರಾಜ್ಕುಮಾರ್..ಇಷ್ಟು ವರ್ಷಗಳು ಕಳೆದರು ಕನ್ನಡಿಗರ ಮನದಲ್ಲಿ ರಾಜ್ ಕುಮಾರ್ ಎಂದಿಗೂ ಅಜರಾಮರ..ಅಣ್ಣಾವ್ರ ಪುಣ್ಯಸ್ಮರಣೆ ಹಿನ್ನೆಲೆ ಸಮಾಧಿಗೆ ದೊಡ್ಮನೆ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿದೆ..ಕಂಠೀರವ ಸ್ಟುಡಿಯೋಗೆ ಡಾ.ಶಿವರಾಜ್ಕುಮಾರ್, ರಾಘಣ್ಣ & ಪುನೀತ್ ಕುಟುಂಬಸ್ಥರು ಆಗಮಿಸಿ ನಮನ ಸಲ್ಲಿಸಿದ್ದಾರೆ..ಅವರು ಕನ್ನಡ ಮತ್ತು ಕರ್ನಾಟಕದ ಕಲ್ಯಾಣಕ್ಕಾಗಿ "ಗೋಕಾಕ್ ಚಳುವಳಿಯಂತಹ ಹಲವಾರು ಪ್ರತಿಭಟನೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದರು..5 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ನಟನ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಾರೆ