Publish Date: Mon, 18 Apr 2022 (16:03 IST)
Updated Date: Mon, 18 Apr 2022 (20:05 IST)
ಬೆಂಗಳೂರು : ಇಂದು ರಾಜ್ಯದಲ್ಲಿ ಶೂನ್ಯ ಮರಣ ಪ್ರಮಾಣಯಿದ್ದು, 53 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಆಸ್ಪತ್ರೆಯಿಂದ 44 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಲಿವರೆಗೂ ಬಟ್ಟು 39,04,850 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5,301 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.
ಪ್ರಸ್ತುತ 1,473 ಜನರಿಗೆ ಕೊರೊನಾ ಸೋಂಕು ಇದೆ. ಸೋಂಕಿನ ಪ್ರಮಾಣ 0.99% ಮತ್ತು ಮರಣವಾರು ಪ್ರಮಾಣ 0.00% ಇದೆ. ಈ ವಾರ ಪೂರ್ತಿ ಕೊರೊನಾ ಸೋಂಕಿನಿಂದ ಯಾರು ಮೃತಪಟ್ಟಿಲ್ಲ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 51 ಕೊರೊನಾ ಪ್ರಕರಣ ದಾಖಲಾಗಿದ್ದು, ಶೂನ್ಯ ಮರಣ ಪ್ರಮಾಣವಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 51, ದಕ್ಷಿಣಕನ್ನಡ 2 ಕೊರೊನಾ ಪ್ರಕರಣಗಳು ದಾಖಲಾಗಿದೆ. ಉಳಿದ 28 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ.