ಮೈಸೂರು : ಅಧಿಕಾರಿಗಳಿಗೆ ಹೆಂಡ್ತಿಗಿಂತ ಫೈಲ್ ಮೇಲೆ ಪ್ರೀತಿ ಜಾಸ್ತಿ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಇಂದು ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಸಂಸದರು ಗರಂ ಆದರು. ಅಧಿಕಾರಿಗಳಿಗೆ ಫೈಲ್ ಮೇಲೆ ಪ್ರೀತಿ ಜಾಸ್ತಿ ಇದೆ. ಆ ಪ್ರೀತಿಗಾಗಿ ತಮ್ಮ ಟೇಬಲ್ನಿಂದ ಫೈಲ್ ನಾ ಮುಂದಕ್ಕೆ ಕಳಿಸೋದೆ ಇಲ್ಲ.
ಫೈಲ್ ಇಡ್ಕೊಂಡು ಕೂತು ಬಿಡುತ್ತಾರೆ. ಏನ್ ಕೆಲಸ ಮಾಡಿದ್ದೀರಾ ಅಂತಾ ಕೇಳಿದ್ರೆ, ಬರೀ ಹಳೆ ಸ್ಟೋರಿ ಹೇಳೋಕೆ ಶುರು ಮಾಡುತ್ತಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಅವರು ಜೆಡಿಎಸ್ ಶಾಸಕ ಸಾರಾ ಮಹೇಶ್ ಕಾಲೆಳೆದರು.
ಏ.. ಮಂಜು ವಿಧಾನಸೌಧದಲ್ಲಿ ಚರ್ಚೆ ಮಾಡೋಕೆ ನೀವು ಬಿಡಲ್ಲ. ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿದ್ರೆ ಸರ್ಕಾರಕ್ಕೆ ಮುಟ್ಟಲ್ಲ. ನಾವು ಏನ್ ಮಾಡಬೇಕಪ್ಪ ಎಂದು ಪ್ರಶ್ನಿಸಿದರು.