Select Your Language

Notifications

webdunia
webdunia
webdunia
webdunia

ಮೈಸೂರು ಲ್ಯಾಂಪ್ ಆಸ್ತಿ ಖಾಸಗಿ ಒಡೆತನಕ್ಕೆ ಕೊಡುವುದಿಲ್ಲ

ಮೈಸೂರು ಲ್ಯಾಂಪ್ ಆಸ್ತಿ ಖಾಸಗಿ ಒಡೆತನಕ್ಕೆ ಕೊಡುವುದಿಲ್ಲ
ಬೆಂಗಳೂರು , ಮಂಗಳವಾರ, 15 ಫೆಬ್ರವರಿ 2022 (15:14 IST)
ಬೆಂಗಳೂರುನಗರ, ಮುಂಬೈ,ಗುಜರಾತ್ ಸೇರಿದಂತೆ ವಿವಿಧ ಭಾಗಗಳಲ್ಲಿ ಮೈಸೂರ್ ಲ್ಯಾಂಪ್ ಲಿಮಿಟೆಡ್‍ಗೆ 249.10 ಕೋಟಿ ಆಸ್ತಿಯಿದ್ದು, ಎನ್‍ಜಿಇಎಫ್ ಲಿ.,ಗೂ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ಇದನ್ನು ಪರಭಾರೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
 
ವಿಧಾನಪರಿಷತ್‍ನಲ್ಲಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಮೈಸೂರು ಲ್ಯಾಂಪ್ಸ್‍ಗೆ ನಗರದ ಮಲ್ಲೇಶ್ವರಂನ ಪಶ್ಚಿಮ ಹಳೇ ತುಮಕೂರು ರಸ್ತೆಯಲ್ಲಿ 21 ಎಕರೆ 6.73 ಗುಂಟೆ ಭೂಮಿ ಮತ್ತು ಕಟ್ಟಡಗಳಿವೆ. ರಾಜ್‍ಮಹಲ್ ವಿಲಾಸ್ ಬಡಾವಣೆಯ 2ನೇ ಹಂತದಲ್ಲಿ ಎಚ್‍ಐಜಿ ಬಂಗಲೆ 307 ಚದರ.ಮೀ ವಿಸ್ತೀರ್ಣವಿದೆ.
 
ಅದೇ ಜಾಗದಲ್ಲಿ 309 ಚದರ ಮೀಟರ್ ಮತ್ತೊಂದು ನಿವೇಶನವಿದೆ. ಮುಂಬೈನ ಪೊರ್ಲಿ ಪ್ರದೇಶದ ಟಿವಿ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ 79 ಚದರ ಅಡಿ ಕಟ್ಟಡವಿದೆ. ಅಹಮದಾಬಾದ್‍ನಗರದ ನವರಂಗ್ ವೃತ್ತದಲ್ಲಿ ಜಿಟಿ ಅಸೋಸಿಯೇಷನ್ ಸಮುಚ್ಚಯದ 8ನೆ ಹಂತಸ್ತಿನಲ್ಲಿ 1043 ಚದರ ಅಡಿ ಕಟ್ಟಡ, ನೆಲಮಹಡಿಯಲ್ಲಿ 300 ಅಡಿ ಜಾಗ ಇದೆ. ಈ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 249.10 ಕೋಟಿ ಎಂದು ಅಂದಾಜಿಸಲಾಗಿದೆ.
 
ಎನ್‍ಜಿಇಎಫ್‍ನ ಸಂಸ್ಥೆಗೆ ಬೆಂಗಳೂರಿನ ಕೆಆರ್‍ಪುರಂ ತಾಲ್ಲೂಕಿನ ಬಯ್ಯಪ್ಪನಹಳ್ಳಿ ಮತ್ತು ಬೆನ್ನಿಗಾನಹಳ್ಳಿ ಗ್ರಾಮಗಳಲ್ಲಿ 119.60 ಎಕರೆ ಜಮೀನು ಇದ್ದು ಇದರಲ್ಲಿ 105 ಎಕರೆ ಕಾಂಪೌಂಡ್‍ನೊಳಗೆ ಉಳಿದ ಜಮೀನು ಕಾಂಪೌಂಡ್‍ನ ಹೊರಗೆ ಇದೆ. ಇದನ್ನು ಖಚಿತಪಡಿಸಿಕೊಳ್ಳಲು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆ ಇಲಾಖೆಗಳನ್ನು ಕೋರಲಾಗಿದೆ. ಕಚ್ಚಾ ಮಾಲಾಗಿ ಉಪಯೋಗಿಸುತ್ತಿದ್ದ 14.57 ಕೆಜಿ ಬೆಳ್ಳಿ , 5.5 ಕೆಜಿ ಮಿಶ್ರ ಲೋಹದ ಚರಾಸ್ತಿ ಸಹ ಇದೆ.
 
ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಬೆಂಗಳೂರಿನ ಇತಿಹಾಸ, ರಾಜ್ಯದ ಆಹಾರ ಪದ್ದತಿ ಸೇರಿದಂತೆ ಹಲವಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೊಳಿಸಲು ಬೆಂಗಳೂರು ಬೆಳಕು ಎಂ ಬ ಕಾರ್ಯಕ್ರಮ ರೂಪಿಸಲಾಗಿದೆ. ಈ ಜಾಗದ ಹಸರೀಕರಣ ಹಾಗೂ ವಿವಿಧ ಯೋಜನೆಗಳಿಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 7 ಮಂದಿ ಐಎಎಸ್ ಅಧಿಕಾರಿಗಳು, 5 ಖಾಸಗಿ ವ್ಯಕ್ತಿಗಳನ್ನು ಒಳಗೊಂಡ ಟ್ರಸ್ಟ್‍ನ್ನು ರಚಿಸಲಾಗಿದೆ. ಯಾವುದೇ ಕಾರಣಕ್ಕೂ ಜಾಗವನ್ನು ಪರಭಾರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರು ಫ್ಲೈಓವೇರ್ ಒಪೆನ್ ಮಾಡಿ -ಸಿಎಂಗೆ ಸುರೇಶ್ ಕುಮಾರ್ ಪತ್ರ