Publish Date: Mon, 14 Feb 2022 (14:04 IST)
Updated Date: Mon, 14 Feb 2022 (16:07 IST)
ಎಲೆಕ್ಟ್ರಿಷಿಯನ್ ತಂದೆ ಪುತ್ರನ ಕ್ರಿಕೆಟ್ ಭವಿಷ್ಯದ ಕನಸಿಗೆ ಸೂಕ್ತ ಮಾರ್ಗದರ್ಶನ ನೀಡಲು ಬೇಕಾಗಿದ್ದ ಖರ್ಚನ್ನು ಭರಿಸಲು ವಿಫಲನಾಗಿದ್ದರೂ ಸಹ ಈಗ ಅದೇ ಪುತ್ರ ಕ್ರಿಕೆಟ್ ಜೀವನದಲ್ಲಿ ತನ್ನ ಅಂಬೆಗಾಲಿಡಲು ಸಜ್ಜಾಗುತ್ತಿದ್ದಾರೆ.
ಹೈದರಾಬಾದ್ನ ಚಂದ್ರಾಯನಗುಟ್ಟಾ ಪ್ರದೇಶದಲ್ಲಿ ಅತ್ಯದ್ಭುತವಾಗಿ ಕ್ರಿಕೆಟ್ ಆಡುತ್ತಿದ್ದ 9 ವರ್ಷದ ಪುಟ್ಟ ಪೋರ ಇದೀಗ ತನ್ನ 19ನೇ ವರ್ಷ ವಯಸ್ಸಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 1.7 ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದಾರೆ.
2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎನ್ ತಿಲಕ್ ವರ್ಮಾರನ್ನು 1.7 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಕ್ರಿಕೆಟಿಗನಾಗಿ ತಿಲಕ್ ರೂಪುಗೊಳ್ಳುವದರ ಹಿಂದೆ ಕೋಚ್ ಸಲಾಮ್ ಬಯಾಶ್ರ ಶ್ರಮ ಬಹಳಷ್ಟಿದೆ.
ತಿಲಕ್ಗೆ ಅಗತ್ಯವಿದ್ದ ಮಾರ್ಗದರ್ಶನ, ಆಹಾರ ಹಾಗೂ ಎಷ್ಟೋ ಸಂದರ್ಭಗಳಲ್ಲಿ ತನ್ನ ಐದು ಮಂದಿ ಕುಟುಂಬಸ್ಥರು ವಾಸಿಸುತ್ತಿದ್ದ ಸ್ವಂತ ಮನೆಯಲ್ಲಿ ತಿಲಕ್ಗೆ ಆಶ್ರಯ ನೀಡಿದ್ದರಂತೆ.
ತಿಲಕ್ ತಂದೆ ನಂಬೂರಿ ನಾಗರಾಜರಿಗೆ ಅವರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸುವಷ್ಟು ಹಣ ಇರಲಿಲ್ಲ. ಈ ಸಂದರ್ಭದಲ್ಲಿ ಸಲಾಮ್, ತಿಲಕ್ಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ತಿಲಕ್ ವರ್ಮಾ, ನನ್ನ ಬಗ್ಗೆ ನೀವು ಏನನ್ನೇ ಬರೆಯದಿದ್ದರೂ ಅಡ್ಡಿಲ್ಲ, ಆದರೆ ನನ್ನ ಕೋಚ್ ಸರ್ ಬಗ್ಗೆ ನೀವು ಅವಶ್ಯವಾಗಿ ಬರಯಲೇಬೇಕು ಎಂದು ಮಾಧ್ಯಮಗಳ ಎದುರು ಹೇಳಿದ್ದರಂತೆ.
ಕ್ರಿಕೆಟ್ಗೆ ಬೇಕಾದ ಎಲ್ಲಾ ವೆಚ್ಚಗಳನ್ನು ಸಲಾಮ್ ಭಾಯಿ ನೋಡಿಕೊಂಡಿದ್ದಾರೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಅಂದರೆ ಅದಕ್ಕೆ ಸಲಾಮ್ ಹಾಗೂ ಅವರ ಕುಟುಂಬಸ್ಥರ ಬೆಂಬಲವೇ ಕಾರಣ ಎಂದು ತಿಲಕ್ ಹೇಳಿದ್ದಾರೆ.