Publish Date: Fri, 06 Jul 2018 (14:31 IST)
Updated Date: Fri, 06 Jul 2018 (14:37 IST)
ತೀವ್ರ ಗಾಯಗೊಂಡು ರಸ್ತೆ ಒದ್ದಾಡುತ್ತಿದ್ದ ಕೋತಿಯ ನ್ನ ಕೊಂಡೋಯ್ದು ಚಿಕಿತ್ಸೆ ಕೊಡಿಸಿ ಪೋಷಣೆ ಮಾಡುವ ಮೂಲಕ ತುಮಕೂರಿನ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ.
ಇಲ್ಲಿನ ಹನುಮಂತಪುರ ನಿವಾಸಿಗಳಾದ ನವೀನ್ ಚೇತನ್ ,ರಾಜೇಶ್ , ಮಂಜು ಎಂಬುವರು ತಡರಾತ್ರಿ ಸಮೀಪದ ದೇವರಾಯನದುರ್ಗ ಪ್ರವಾಸಿ ತಾಣಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ತಮ್ಮ ಕಾರಿಗೆ ಅಡ್ಡವಾಗಿ ಬಂದ ಮಂಗವೊಂದು ಮುಂದೆ ಸಾಗದೆ ಒದ್ದಾಡುತ್ತಿತ್ತು.
ಬಳಿಕ ಕಾರಿನಿಂದ ಕೆಳಗಿಳಿದ ಯುವಕರು ಮಂಗ ತೀವ್ರ ಗಾಯಗಳಿಂದ ಬಳಲುತ್ತಿರುವುದನ್ನ ಕಂಡು ಕೂಡಲೇ ಸಮೀಪದ ಆಸ್ಪತ್ರೆಗೆ ಕೋಂಡೋಯ್ದು ಚಿಕಿತ್ಸೆ ಕೊಡಿಸಿ, ಇದೀಗ ಸ್ನೇಹಿತನ ಮನೆಯಲ್ಲಿ ಪೋಷಿಸುತ್ತಿದ್ದಾರೆ. ತುಮಕೂರಿನ ಈ ಯುವಕರ ಮಾನವೀಯ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.