Publish Date: Mon, 23 Oct 2023 (15:22 IST)
Updated Date: Mon, 23 Oct 2023 (20:26 IST)
ರಾಜಧಾನಿ ಬೆಂಗಳೂರಿನಲ್ಲೂ ಆಯುಧ ಪೂಜೆ ಸಂಭ್ರಮ ಜೋರಾಗಿದೆ.. ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರೋ ಗಣಪತಿ ದೇಗುಲದಲ್ಲಿ ಆಯುಧ ಪೂಜೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗಿದೆ.
ವಾಹನ ಗಣಪತಿ ಎಂದೇ ಪ್ರಸಿದ್ಧವಾಗಿರುವ ಗಣಪತಿ ದೇಗುಲ ಭಕ್ತರ ದಂಡೇ ಆಗಮಿಸಿದೆ.. ಭಕ್ತಾದಿಗಳು ಗಣಪತಿಗೆ ಪೂಜೆ ಸಲ್ಲಿಸಿ, ವಾಹನಗಳಿಗೂ ದೇವಾಲಯದಲ್ಲಿ ಪೂಜೆ ಮಾಡಿಸಲಾಗಿದೆ.. ಇನ್ನು ಈ ಗಣಪತಿಗೆ ಪೂಜೆ ಸಲ್ಲಿಸಿದ್ರೆ ಅಪಘಾತವಾಗಲ್ಲ ಎಂಬ ನಂಬಿಕೆ ಇದ್ದು, ಪ್ರತಿ ವರ್ಷ ಇದೇ ದೇವಸ್ಥಾನದಲ್ಲಿಯೇ ಕೆಲ ಭಕ್ತಾದಿಗಳು ವಾಹನಗಳಿಗೆ ಪೂಜೆ ಸಲ್ಲಿಸಲು ಆಗಮಿಸುತ್ತಾರೆ.