Publish Date: Mon, 07 Oct 2019 (10:38 IST)
Updated Date: Mon, 07 Oct 2019 (10:41 IST)
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆ ಇಂದು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ.
ಅರಮನೆಯಲ್ಲಿ ಆಯುಧ ಪೂಜೆ ಆರಂಭವಾಗಿದ್ದು, ಪಾರಂಪರಿಕ ಆಯುಧಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗಿದೆ. ರಾಜವಂಶಸ್ಥರು ಹಾಗೂ ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ಪೂಜೆ ನೆರವೇರುತ್ತಿದೆ.
ಬೆಳಗ್ಗೆ 10.10 ರಿಂದ 10.35 ರ ವರೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಆಯುಧ ಪೂಜೆ ನೆರವೇರಸಲಿದ್ದಾರೆ. ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಫಲ ತಾಂಬೂಲ ನೀಡುವುದರ ಮೂಲಕ, ಪುಷ್ಪಾರ್ಚನೆ ಮಾಡುವುದರ ಮೂಲಕ ಗಜಪಡೆಗೆ ಚಾಲನೆ ನೀಡಿದ್ದಾರೆ.