Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆಯ ಉಚಿತ ‌ಪ್ರಯಾಣಕ್ಕಿಲ್ಲ ಮಹಿಳೆಯರ ಆಸಕ್ತಿ !

Women are not interested in the free travel of Shakti Yojana
bangalore , ಭಾನುವಾರ, 25 ಜೂನ್ 2023 (19:13 IST)
ರಾಜ್ಯ ಸರ್ಕಾರ ತನ್ನ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಯಲ್ಲಿ ಮೊದಲನೆಯ ಯೋಜನೆಯಾಗಿ ಶಕ್ತಿ ಯೋಜನೆಯನ್ನು ಜೂನ್ ೧೧ ರಂದು ಅಧಿಕೃತವಾಗಿ ಘೋಷಿಸಲಾಯಿತು,ಅಧಿಕೃತ ಘೋಷಣೆ ಆಗ್ತಿದಂಗೆ ಮಹಿಳೆಯರು ಉಚಿತ ಪ್ರಯಾಣ ಎಂದು, ರಾಜ್ಯದ ‌ಬಹುತೇಕ ಮಹಿಳೆಯರು ‌ನಾ ಮುಂದು, ತಾ ಮುಂದು,ಮುಗಿಬಿದ್ದು ಶಕ್ತಿ ಮೀರಿ ಪ್ರಯಾಣಿಸುತ್ತಿದ್ದ ಮಹಿಳೆಯರು ಇದೀಗ ತಮ್ಮ ಉಚಿತ ಪ್ರಯಾಣದ ಜೋಶ್ ಎಲ್ಲೋಯ್ತು.ಮಹಿಳೆಯರಿಗೆ ವೀಕೆಂಡ್ ಬಂದ್ರೆ ಸಾಕು, ಉಚಿತ ಪ್ರಯಾಣ ಎಂದು ಕಳೆದ ಹತ್ತು ಹದಿನೈದು ದಿನಗಳಿಂದ  ಪ್ರವಾಸಿ ತಾಣಗಳಿಗೆ ಸುತ್ತುತ್ತಿದ್ದ ಮಹಿಳೆಯರು ಇಂದು ವೀಕೆಂಡ್ ಇದ್ದರೂ ಕೂಡಾ ಬಿಎಂಟಿಸಿ,,ಆಗ್ಲಿ ಕೆಎಸ್ಅರ್ಟಿಸಿಯಲ್ಲಿ ಆಗ್ಲಿ ಬಸ್ ಗಳಲ್ಲಿ ಮಹಿಳೆಯರು ಕಂಡುಬರಲಿಲ್ಲ, ಎಲ್ಲಾ ಸೀಟುಗಳು ಖಾಲಿ ಖಾಲಿಯಾಗಿದ್ದವು,ಜೊತೆಗೆ ಕೆಲವೊಂದು ರೋಟ್ ನಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮಹಿಳೆಯರು ಪ್ರಯಾಣ ಮಾಡಲು ಕಂಡು ಬಂದಿದ್ದು,ಇದರಿಂದ ಇಂದು ಕಂಡಕ್ಟರ್ ಕೂಡ ಶಕ್ತಿ ಯೋಜನೆ ಜಾರಿಯಾದಗಿನಿಂದ ಇಲ್ಲಿಯವರೆಗೆ ಮಹಿಳೆಯರ ಪ್ರಯಾಣದ ಆಸಕ್ತಿ ಕಡಿಮೆಯಾಗಿರಲ್ಲಿಲ್ಲಾ ಅದ್ಯಕೋ ಏನೋ ಇವತ್ತು ವೀಕೆಂಡ್ ಇದ್ರೂ ಕೂಡ ಮಹಿಳೆಯರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ತಿಂಗಳಲ್ಲಿ ಡಬ್ಬಲ್ ಆದ ಬೆಳೆಕಾಳುಗಳ ಬೆಲೆ..!