Publish Date: Sun, 25 Jun 2023 (16:28 IST)
Updated Date: Sun, 25 Jun 2023 (17:30 IST)
ನಂಜನಗೂಡಿನಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯ್ತು.ಗ್ರಾಮಸ್ಥರು,ಯುವ ಮುಖಂಡರು ಹಾಗೂ ಧರ್ಮ ಜಾಗೃತಿ ಸಮಿತಿ ಆಯೋಜಿಸಿದ್ದ ಹನುಮಜಯಂತಿ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ರು.ಈ ವೇಳೆ ಪುಟ್ಟ ಮಕ್ಕಳಿಗೆ ರಾಮ ಸೀತೆ ಹಾಗೂ ಹನುಮನ ವೇಷ ಧರಿಸಿ ಮೆರವಣಿಗೆ ಮಾಡಿದರು, ಹಾಗೂ ಡೊಳ್ಳು ಕುಣಿತದ ಜೊತೆಗೆ ಕೇಸರಿ ಶಾಲು ಧರಿಸಿದ ನೂರಾರು ಯುವಕರು ಜೈ ಆಂಜನೇಯ,ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ರಾಮನಭಂಟನ ಜಯಘೋಷ ಮೊಳಗಿಸಿದ್ರು.