ಮುರುಘಾ ಮಠದ ಸ್ವಾಮೀಜಿ ನೇಮಕ ವಿಚಾರ ಕುರಿತು ನಡೆದ ವೀರಶೈವ ಮಹಾಸಭಾದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಹಿಳೆಯೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಿಳೆಯಿಂದ ವಿರೋಧ ವ್ಯಕ್ತವಾದ ಘಟನೆ ಧಾರವಾಡ ನಗರದ ಲಿಂಗಾಯತ ಭವನದಲ್ಲಿ ನಡೆದಿದೆ. ವಿಜಯಲಕ್ಷ್ಮಿ ಶಿರರೊಳ್ಳಿ ಎಂಬ ಮಹಿಳೆಯಿಂದ ವಿರೋಧ ವ್ಯಕ್ತವಾಗಿದ್ದು, ಲಿಂಗಾಯತ ಭವನದ ಎದುರು ಮುರುಘಾಮಠದ ಶಿವಯೋಗಿ ಶ್ರೀಗಳನ್ನು ಕೈ ಬಿಟ್ಟು, ಮಲ್ಲಿಕಾರ್ಜುನ ಸ್ವಾಮೀಜಿ ಆಯ್ಕೆಗೆ ವಿರೋಧಿಸಿದ್ರು.
ನಮ್ಮ ಸ್ವಾಮೀಜಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ಹೊಸ ಸ್ವಾಮೀಜಿಗಳನ್ನು ಆಯ್ಕೆ ಮಾಡಲಾಗಿದೆ, ಈ ಅನ್ಯಾಯದ ನಡುವೆ ಕಾರ್ಯಾಗಾರ ಮಾಡುತ್ತಿರೋದು ಯಾಕೆ? ಅಂತ ವೀರಶೈವ ಸಮುದಾಯದ ನಾಯಕರಿಗೆ ಪ್ರಶ್ನೆ ಹಾಕಿದ್ರು.
ಸ್ಥಳದಲ್ಲಿಯೇ ಮಹಿಳೆ ಹಾಗೂ ವೀರಶೈವ ಸಮುದಾಯದ ನಾಯಕರ ನಡುವೆ ವಾಗ್ವಾದ ಜೋರಾಗಿಯೇ ನಡೆಯಿತು.