Select Your Language

Notifications

webdunia
webdunia
webdunia
webdunia

ಪ್ರಖ್ಯಾತ ಮಠದ ಸ್ವಾಮೀಜಿಗೆ ಕಳ್ಳ, ಸುಳ್ಳ ಸ್ವಾಮೀಜಿ ಎಂದ ಶಿವಯೋಗಿ ಸ್ವಾಮೀಜಿ

ಪ್ರಖ್ಯಾತ ಮಠದ ಸ್ವಾಮೀಜಿಗೆ ಕಳ್ಳ, ಸುಳ್ಳ ಸ್ವಾಮೀಜಿ ಎಂದ ಶಿವಯೋಗಿ ಸ್ವಾಮೀಜಿ
ಹುಬ್ಬಳ್ಳಿ , ಬುಧವಾರ, 23 ಅಕ್ಟೋಬರ್ 2019 (13:56 IST)
ನಾಡಿನ ಪ್ರಮುಖ ಸ್ವಾಮೀಜಿಯೊಬ್ಬರ ಕುರಿತು ಮತ್ತೊಬ್ಬ ಸ್ವಾಮೀಜಿ ಕಳ್ಳ, ಸುಳ್ಳ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಧಾರವಾಡದ ಮುರಾಘಾಮಠಕ್ಕೆ ನೂತನ ಮಠಾಧೀಶರಾಗಿರುವ ಮಲ್ಲಿಕಾರ್ಜುನ ಸ್ವಾಮೀಜಿ ಮೋಸ, ಕಳ್ಳ, ಸುಳ್ಳ ಸ್ವಾಮೀಜಿ ಆಗಿದ್ದಾರೆ. ಹೀಗಂತ ಶಿವಯೋಗಿ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದ್ದಾರೆ. 

ಧಾರವಾಡದ ಮುರಾಘಾಮಠಕ್ಕೆ ಮಠಾಧೀಶರನ್ನಾಗಿ ಕಾಂಗ್ರೆಸ್ ನ ಗೂಂಡಾ ರಾಜಕಾರಣಿ ವಿನಯ ಕುಲಕರ್ಣಿ ಮತ್ತು ಅವರ ಸಹಚರರು ಸೇರಿಕೊಂಡು ಒಳಸಂಚು ಮಾಡಿ ತಮ್ಮವರನ್ನು ಮೋಸದ ಹಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳನ್ನು ನೇಮಕ ಮಾಡಿದ್ದಾರೆ. ಈ ಮಲ್ಲಿಕಾರ್ಜುನ ಸ್ವಾಮೀಜಿ ಈ ಹಿಂದೆ ಗದಗದ ಮುಳಗುಂದ, ಧಾರವಾಡದ ಪಶುಪತಿಹಾಳ ಮಠಗಳಲ್ಲಿ ಮತ್ತು ಕುಂದಗೋಳದ ಗುಡಗೇರಿಗಳಲ್ಲಿ ಇದ್ದಾಗ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಾಡಿದ್ದಾರೆ.

ಇಂತವರ ಮೇಲೆ ಭಕ್ತರು ಹಿಡಿಶಾಪ ಹಾಕಿದ್ದಾರೆ. ಇಂತವರನ್ನು ಕಾಂಗ್ರೆಸ್ ನ ಮಾಜಿ ಶಾಸಕ ವಿನಯ ಕುಲಕರ್ಣಿ ಸುದೀರ್ಘ ಇತಿಹಾಸ ಹೊಂದಿದ್ದ ಮಠಕ್ಕೆ ನೂತನ ಮಠಾಧೀಶರನ್ನಾಗಿ ಮಾಡಿದ್ದಾರೆ.

ಇದರಿಂದ ತಮ್ಮ ಸ್ವಾರ್ಥಕ್ಕಾಗಿ ವಿನಯ ಕುಲಕರ್ಣಿ ಅವರ ಸಹಚರರು ಏನು ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೂಡಲೇ ಇಂತಹ ಕಳ್ಳ -ಸುಳ್ಳ ಸ್ವಾಮೀಜಿಯನ್ನು ಮುರಾಘಾಮಠದಿಂದ ಹೊರಕ್ಕೆ ಹಾಕಬೇಕು. ಅಲ್ಲದೇ ಶೀಘ್ರದಲ್ಲೇ ಮುರಾಘಾಮಠದಲ್ಲೇ ಜೀವಂತ ಸಮಾಧಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರ ಮೇಲಿನ ಅಸಮಾಧಾನದಿಂದಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ- ಪ್ರತಾಪ್ ಗೌಡ ಪಾಟೀಲ್