Select Your Language

Notifications

webdunia
webdunia
webdunia
webdunia

ಚಾಕುವಿನಿಂದ ಇರಿದು ಮಹಿಳೆ ಕೊಲೆ

woman
ಮಹಿಳೆಯೋರ್ವಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಜೆಜೆ ನಗರದ ನಾಲ್ಕನೇ ಕ್ರಾಸ್‌ನಲ್ಲಿ ನಡೆದಿದೆ. ಪರ್ವಿನ್ ತಾಜ್ ಕೊಲೆಯಾದ ಮಹಿಳೆ. ಮಹಮ್ಮದ್ ಜುನೈದ್ ಎಂಬಾತ ಕೊಲೆ ಮಾಡಿರುವ
ಆರೋಪಿ. ಜುನೈದ್ ಹಾಗೂ ಮೃತ ಮಹಿಳೆ ಇಬ್ಬರೂ ಸಂಬಂಧಿಗಳು. ಸಣ್ಣಪುಟ್ಟ ವಿಚಾರಕ್ಕೂ ಜಗಳ ಆಗ್ತಿದ್ರಿಂದ ಕೆಲ ತಿಂಗಳುಗಳಿಂದ ಪತ್ನಿಯಿಂದ ದೂರವಾಗಿದ್ದ ಜುನೈದ್. ಪತ್ನಿ ದೂರವಾದ ಬಳಿಕ ಮಾನಸಿಕವಾಗಿ ನೊಂದಿದ್ದ ಆರೋಪಿ ಜುನೈದ್ ಗೆ ಸಂಬಂಧಿ ಪರ್ವಿನ್ ತಾಜ್ ಹತ್ತಿರವಾಗಿದ್ದಳು.

ಆದರೆ ಏನಾಯ್ತೋ ಅವಳು ಕೂಡ ಜುನೈದ್‌ನನ್ನ ಅವೈಡ್ ಮಾಡುತ್ತಿದ್ದಳು. ಈ ವಿಚಾರಕ್ಕೆ ಪರ್ವಿನ್ ತಾಜ್ ಜೊತೆಗೂ ಜಗಳ ಮಾಡಿಕೊಂಡಿದ್ದ ಜುನೈದ್, ಪರ್ವಿನ್ ತಾಜ್ ಮನೆಯಲ್ಲಿ ಒಬ್ಬಳೇ ಇರುವುದನ್ನ ನೋಡಿಕೊಂಡು ಚಾಕುವಿನೊಂದಿಗೆ ಹೋಗಿದ್ದ. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದ. ಪರ್ವಿನ್ ತಾಜ್ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜುನೈದ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಾಯ ಕೋರಿ ಬಂದ ಯುವತಿಗೆ ಏನ್ ಮಾಡ್ದ ಗೊತ್ತಾ?