Webdunia - Bharat's app for daily news and videos

Install App

ಧರ್ಮಸ್ಥಳ ಸಂಘದ ಸಾಲದ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಮಹಿಳೆ

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (10:13 IST)
ಮಂಡ್ಯ: ಇತ್ತಿಚೆಗಷ್ಟೇ ಶಾಸಕ ನರೇಂದ್ರಸ್ವಾಮಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ನಿಯಮ ಮೀರಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಈಗ ಅವರದೇ ಕ್ಷೇತ್ರದ ಮಹಿಳೆಯೊಬ್ಬರು ಸಂಘದ ಸಾಲದ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ 35 ವರ್ಷದ ಮಹಿಳೆಯ ಮಹಾಲಕ್ಷ್ಮಿ ಎಂಬಾಕೆ ಸಾಲದ ಕಂತು ಕಟ್ಟಲಾಗದೇ ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಆಕೆಯ ಪತಿ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತ್ನಿಯ ಸಾವಿಗೆ ಸಾಲದ ಕಂತಿನ ಹಣ ಕಟ್ಟುವಂತೆ ಗ್ರಾಮೀಣಾಭಿವೃದ್ಧಿ ಸಂಘದವರು ನೀಡಿದ ಕಿರುಕುಳವೇ ಕಾರಣ ಎಂದಿದ್ದಾರೆ.

ಐದು ತಿಂಗಳ ಹಿಂದೆ ನನ್ನ ಪತ್ನಿ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ಬುಧವಾರ 1,700 ರೂ. ಕಟ್ಟಬೇಕಿತ್ತು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಕೂಡಲೇ ಕಂತಿನ ಹಣ ಕಟ್ಟುವಂತೆ ಅವಾಚ್ಯ ಶಬ್ಧಗಳಿಂದ ನಿಂದಿದ್ದರು. ಇದರಿಂದ ಮನನೊಂದು ಪತ್ನಿ ನೇಣಿಗೆ ಶರಣಾಗಿದ್ದಾಳೆ ಎಂದು ಪತಿ ದೂರಿನಲ್ಲಿ ವಿವರಿಸಿದ್ದಾರೆ.

ಇತ್ತೀಚೆಗೆ ಶಾಸಕ ನರೇಂದ್ರ ಸ್ವಾಮಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧ ಸಂಸ್ಥೆ ಅಧಿಕ ಬಡ್ಡಿಗೆ ಸಾಲ ನೀಡುತ್ತಿದೆ. ಹೆಸರಿಗೆ ಧರ್ಮಸ್ಥಳ  ಅಲ್ಲಿ ನಡೆಯುತ್ತಿರುವುದೆಲ್ಲಾ ಅಧರ್ಮ. ಹೀಗಾಗಿ ಜನ ಸರ್ಕಾರದ ಸಾಲದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದಿದ್ದರು. ಅವರು ಹೇಳಿ ವಾರ ಕಳೆಯುವಷ್ಟರಲ್ಲಿ ಅವರದೇ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ದುರದೃಷ್ಟಕರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರದ ವಿರುದ್ಧ ಕೆಎಸ್ಆರ್ ಟಿಸಿ, ಬಿಎಂಟಿಸಿ ಸಮರ: ಈ ದಿನದಿಂದ ರಸ್ತೆಗಿಳಿಯಲ್ಲ ಬಸ್

ರಾಹುಲ್ ಗಾಂಧಿ ಮತಕಳ್ಳತನದ ಪ್ರತಿಭಟನೆ ಯಾವಾಗ ಡಿಕೆ ಶಿವಕುಮಾರ್ ಹೇಳಿದ್ದೇನು

ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ: ಡಿಕೆ ಶಿವಕುಮಾರ್

Karnataka Weather: ಇಂದಿನಿಂದ ಹವಾಮಾನದಲ್ಲಿ ಈ ಮಹತ್ವದ ಬದಲಾವಣೆ ತಪ್ಪದೇ ಗಮನಿಸಿ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಮುಂದಿನ ಸುದ್ದಿ
Show comments