Select Your Language

Notifications

webdunia
webdunia
webdunia
Monday, 24 February 2025
webdunia

ಕಲುಷಿತ ನೀರು ಸೇವಿಸಿ ಮಹಿಳೆ ಸಾವು

ಕಲುಷಿತ ನೀರು ಸೇವಿಸಿ ಮಹಿಳೆ ಸಾವು
ವಿಜಯನಗರ , ಬುಧವಾರ, 11 ಜನವರಿ 2023 (20:21 IST)
ವಿಜಯನಗರದಲ್ಲಿ ಪ್ರಾಣಕ್ಕೆ ಜೀವಜಲ ಪ್ರಾಣಕ್ಕೆ ಕುತ್ತು ತಂದಿದೆ. ಕಲುಷಿತ ನೀರು ಸೇವಿಸಿ 50 ವರ್ಷದ ಮಹಿಳೆ ಸಾವನಪ್ಪಿದ್ದಾರೆ. 54ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಹೊಸಪೇಟೆಯ ರಾಣಿಪೇಟೆ ನಿವಾಸಿ ಲಕ್ಷ್ಮಿದೇವಿ ಮೃತ ಮಹಿಳೆ. ಗ್ರಾಮಸ್ಥರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ಬಡಾವಣೆಯಲ್ಲಿ ಆರೋಗ್ಯ ಇಲಾಖೆ ಬೀಡುಬಿಟ್ಟಿದೆ. ಪೈಪ್​​ಲೈನ್ ಕಾಮಗಾರಿ ನಡೆಯುವ ವೇಳೆ ಕಲುಷಿತ ನೀರು ಮನೆಗೆ ಸರಬರಾಜಾಗಿದೆ. ರಾಣಿಪೇಟೆ, ಚಲುವಾದಿ ಕೇರಿಯ ಹಲವೆಡೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಜನರ ಪ್ರಾಣ ಹರಣವಾಗುತ್ತಿದೆ. ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಂಕಿತ ಉಗ್ರರ ಮನೆಯಲ್ಲಿ ED ಶೋಧ