Select Your Language

Notifications

webdunia
webdunia
webdunia
webdunia

ಅಣ್ಣ ಮೃತಪಟ್ಟ ದಿನವೇ ತಮ್ಮ ಸಾವು

His death happened on the day of his brother's death
ಬೇಲೂರು , ಬುಧವಾರ, 11 ಜನವರಿ 2023 (20:07 IST)
ಅಣ್ಣ ಮೃತಪಟ್ಟ ಒಂದು ವರ್ಷದ ನಂತರ ಅದೇ ದಿನವೇ ತಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ನೆಟ್ಟೆಕೆರೆ ಗ್ರಾಮದ ಪುಟ್ಟಸ್ವಾಮಿ-ಸರೋಜ ದಂಪತಿಗೆ ಶ್ರೀಧರ್, ದಿಲೀಪ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು.‌ ಕಳೆದ ವರ್ಷ ಅಂದರೆ 2022ರ ಜನವರಿ 9ರಂದು ಹಿರಿಯ ಮಗ ಶ್ರೀಧರ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಶ್ರೀಧರ್‌ ಸಹೋದರ ದಿಲೀಪ್ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿ ರಸ್ತೆ ಬದಿಯ ಹೊಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಹೊಲದಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ದಿಲೀಪ್‌ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಅಂದರೆ 2023ರ ಜನವರಿ 9ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ