Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಹಣದಲ್ಲಿ ವಾಷಿಂಗ್ ಮಷಿನ್ ಖರೀದಿಸಿ ಮಹಿಳೆ ಪೂಜೆ: ವಿಡಿಯೊ ಹಂಚಿ ಸಿದ್ದರಾಮಯ್ಯ ಸಂತಸ

Chief Minister Siddaramaiah, Guarantee Scheme, Grihlalakshmi Scheme

Sampriya

ಬೆಂಗಳೂರು , ಗುರುವಾರ, 2 ಅಕ್ಟೋಬರ್ 2025 (12:17 IST)
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷಿಯೂ ಒಂದು. ಮಾಸಿಕವಾಗಿ 2000 ರೂಪಾಯಿ ಮಹಿಳೆಯರ ಖಾತೆಗೆ ಈ ಯೋಜನೆಯ ಮೂಲಕ ಜಮೆಯಾಗುತ್ತದೆ. 

ಗೃಹಲಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು, ಆಯುಧ ಪೂಜೆ ದಿನ ಹೊಸ ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿದ್ದಾರೆ. ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮನಗರದ ಮಹಿಳೆ ಬಿ.ಕೆ.ತುಳಸಿ ಅವರು ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹಾನವಮಿಯ ದಿನ ಹೊಸ ವಾಷಿಂಗ್ ಮೆಷಿನ್ ಖರೀದಿಸಿ, ಪೂಜಿಸುತ್ತಿರುವ ವಿಡಿಯೊ ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸಿತು ಎಂದಿದ್ದಾರೆ.

ಸ್ತ್ರೀಸಬಲೀಕರಣದ ಆಶಯದೊಂದಿಗೆ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯು ಸ್ತ್ರೀಶಕ್ತಿಯನ್ನು ಆರಾಧಿಸುವ ನವರಾತ್ರಿಯಲ್ಲಿ ಮಹಿಳೆಯೊಬ್ಬರ ಸಂಭ್ರಮಕ್ಕೆ ಕಾರಣವಾಗಿರುವುದು ಹೆಚ್ಚು ಅರ್ಥಪೂರ್ಣ ಮತ್ತು ಸಾರ್ಥಕವೆನಿಸಿದೆ ಎಂದು ಸಿಎಂ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ-ದೀಪಾವಳಿಗೆ ಕರ್ನಾಟಕಕ್ಕೆ ₹3705 ಕೋಟಿ ಕೇಂದ್ರದ ಕೊಡುಗೆ: ಪ್ರಲ್ಹಾದ ಜೋಶಿ